ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ: ಎಸ್‌ಪಿ ಶಾಸಕ ಜಾಹಿದ್ ಮನೆಯಲ್ಲಿ ಮನೆಗೆಲಸದಾಕೆ ಮೃತದೇಹ ಪತ್ತೆ

Published : 9 ಸೆಪ್ಟೆಂಬರ್ 2024, 13:29 IST
Last Updated : 9 ಸೆಪ್ಟೆಂಬರ್ 2024, 13:29 IST
ಫಾಲೋ ಮಾಡಿ
Comments

ಭದೋಹಿ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಜಾಹಿದ್ ಬೇಗ್‌ ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೃತದೇಹವು ಬೇಗ್‌ ಅವರ ಮನೆಯ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಜಿಯಾ (18) ಅವರು ಕಳೆದ ಕೆಲ ವರ್ಷಗಳಿಂದ ಬೇಗ್‌ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಬೇಗ್ ಅವರ ಮನೆಯ ಕೊನೆಯ ಮಹಡಿಯ ಕೋಣೆಯೊಂದರಲ್ಲಿ ವಾಸವಿದ್ದರು. ಫ್ಯಾನ್‌ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಹೇಳಿದರು.

‘ಬೆಳಿಗ್ಗೆ ತುಂಬಾ ಹೊತ್ತಾದರೂ ನಾಜಿಯಾ ಎದ್ದಿರಲಿಲ್ಲ. ಇದನ್ನು ಗಮನಿಸಿದ ಶಾಸಕರ ಕುಟುಂಬವು ಆಕೆಯ ಕೋಣೆಯ ಬಳಿ ತೆರಳಿ ನೋಡಿದಾಗ ಒಳಗಡೆಯಿಂದ ಬಾಗಿಲನ್ನು ಲಾಕ್‌ ಮಾಡಿಕೊಂಡು ದುಪ್ಪಟಾದಿಂದ ನೇಣುಬಿಗಿದುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಪೊಲೀಸರು ಬಾಗಿಲನ್ನು ಒಡೆದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು’ ಎಂದು ಸರ್ಕಲ್‌ ಅಧಿಕಾರಿ ಅಜಯ್‌ ಕುಮಾರ್‌ ಚೌಹಾಣ್‌ ತಿಳಿಸಿದರು.

‘ನಾಜಿಯಾ ಎಂಟು ವರ್ಷಗಳಿಂದ ಮನೆಯಲ್ಲಿ ಕೆಲಸಕ್ಕಿದ್ದರು. ಕೊನೆಯ ಮಹಡಿಯಲ್ಲಿ ಆಕೆ ಇರುತ್ತಿದ್ದರು’ ಎಂದು ಬೇಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT