ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ಹಲ್ಲೆ ಆರೋಪ: ಅಧಿಕಾರಿ ಪುತ್ರನಿಗಾಗಿ ಪೊಲೀಸರ ಶೋಧ

Published 17 ಡಿಸೆಂಬರ್ 2023, 16:14 IST
Last Updated 17 ಡಿಸೆಂಬರ್ 2023, 16:14 IST
ಅಕ್ಷರ ಗಾತ್ರ

ಮುಂಬೈ: ಮಹಿಳೆಯೊಬ್ಬರಿಗೆ ಮೇಲೆ ಹಲ್ಲೆ ಮಾಡಿ, ಆಕೆಯ ಮೇಲೆ ವಾಹನವನ್ನು ಹರಿಸಲು ಯತ್ನಿಸಿದ ಆರೋಪದ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿಯೊಬ್ಬರ ಪುತ್ರ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲ್‌ಕುಮಾರ್ ಗಾಯಕ್ವಾಡ್ ಅವರ ಪುತ್ರ ಅಶ್ವಜಿತ್‌ ಗಾಯಕ್ವಾಡ್‌ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು.

ಅಧಿಕಾರಿಯ ಪುತ್ರನ ವಿರುದ್ಧ ಕಾಸರ್‌ವದ್‌ವಾಲಿ ಠಾಣೆಯಲ್ಲಿ ಹಲ್ಲೆ (ಐಪಿಸಿ ಸೆಕ್ಷನ್‌ 323), ನಿರ್ಲಕ್ಷ್ಯದ ವಾಹನ ಚಾಲನೆ (279),  ಶಾಂತಿ ಕದಡಲು ಯತ್ನ (504) ಸೇರಿ ವಿವಿಧ ‍ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಿಯಾ ಸಿಂಗ್‌ ಹೆಸರಿನ ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತನ್ನ ಸಹೋದರಿ ಜೊತೆಗೂಡಿ ಠಾಣೆಯಲ್ಲಿ ಬ್ಯೂಟಿ ಪಾರ್ಲರ್‌ವೊಂದನ್ನು ನಡೆಸುತ್ತಿದ್ದಾರೆ. ಪೊಲೀಸರು ಈಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಆರೋಪಿಯ ಪತ್ತೆಗೆ ಡಿಸಿಪಿ ಅಮರ್ ಜಾಧವ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ಜೈಜೀತ್ ಸಿಂಗ್ ತಿಳಿಸಿದ್ದಾರೆ.

ಕೃತ್ಯವು ಡಿ.11ರಂದು ಬೆಳಗಿನ ಜಾವ 4.30ಕ್ಕೆ ನಡೆದಿದೆ ಎನ್ನಲಾಗಿದೆ. ಮಹಿಳೆಯು ಅಶ್ವಜಿತ್‌ನನ್ನು ಭೇಟಿ ಮಾಡಲು ತೆರಳಿದ್ದು, ಆಗ ವಾಗ್ವಾದ ನಡೆದಿದೆ. ಮಹಿಳೆ ತೆರಳವಾಗ ಆರೋಪಿ ಆಕೆಯ ಮೇಲೆ ವಾಹನ ಹರಿಸಲು ಯತ್ನಿಸಿದ ಎಂದು ದೂರಲಾಗಿದೆ. ಮಹಿಳೆಯು ಹಲ್ಲೆ ಘಟನೆಯನ್ನು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿಯೂ ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT