ನವದೆಹಲಿ: ಮನೆ ಮಾರಾಟ, ಗೃಹಸಾಲ ಯೋಜನೆಗಳ ಹೆಸರಿನಲ್ಲಿ ಜನರನ್ನು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಕೋಲ್ಕತ್ತ, ಮುಂಬೈ ಸೇರಿದಂತೆ 12 ಪ್ರದೇಶಗಳಲ್ಲಿ ಸಿಬಿಐ ಶನಿವಾರ ಶೋಧ ಕಾರ್ಯಾಚರಣೆ ನಡೆಸಿದೆ.

ಜತೆಗೆ ಕೆಲವು ಬಿಲ್ಡರ್ಗಳು ಹಾಗೂ ಹಣಕಾಸು ಸಂಸ್ಥೆಗಳ ವಿರುದ್ಧ 6 ಪ್ರಕರಣಗಳನ್ನೂ ದಾಖಲಿಸಿರುವುದಾಗಿ ತಿಳಿಸಿದೆ.

ಮನೆ ಖರೀದಿ ಹೆಸರಿನಲ್ಲಿ ವಂಚನೆಗೀಡಾಗಿದ್ದ ದೇಶದ ವಿವಿಧ ಭಾಗಗಳ ಜನರು, ಗೃಹ ಸಾಲ ಒದಗಿಸಿದ್ದ ಕೆಲವು ಹಣಕಾಸು ಸಂಸ್ಥೆಗಳು ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುತ್ತಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, ಬಿಲ್ಡರ್ಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಅಸಹಜ ನಂಟಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು 2025ರ ಏಪ್ರಿಲ್ನಲ್ಲಿ ಕೇಂದ್ರಿಯ ತನಿಖಾ ಸಂಸ್ಥೆಗೆ (ಸಿಬಿಐ) ನಿರ್ದೇಶಿಸಿತ್ತು.

ಅದರಂತೆ ಎನ್ಸಿಆರ್ ಹೊರತಾದ ಪ್ರದೇಶಗಳಲ್ಲಿ ತನಿಖೆ ನಡೆಸಿದ ಸಿಬಿಐ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ವರದಿ ಪರಿಶೀಲಿಸಿದ ಸುಪ್ರೀಂಕೋರ್ಟ್, ಬೆಂಗಳೂರು, ಮುಂಬೈ ಹಾಗೂ ಕೋಲ್ಕತ್ತದ ಕೆಲವು ಬಿಲ್ಡರ್ಗಳ ವಿರುದ್ಧ ಒಟ್ಟು 6 ಪ್ರಕರಣ ದಾಖಲಿಸಲು ನಿರ್ದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಎನ್ಸಿಆರ್ ಪ್ರದೇಶದಲ್ಲೂ ತನಿಖೆ ನಡೆಸಿ, 22 ಪ್ರಕರಣಗಳನ್ನು ಈ ಹಿಂದೆ ದಾಖಲಿಸಲಾಗಿದೆ ಎಂದೂ ಸಿಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.