ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಬರಿಮಲೆಗೆ ಶತಾಯುಷಿ ವೃದ್ಧೆ; ಇಸ್ರೇಲ್‌–ಹಮಾಸ್‌ ಯುದ್ಧ ಸ್ಥಗಿತಕ್ಕೆ ಪ್ರಾರ್ಥನೆ

Published 5 ಡಿಸೆಂಬರ್ 2023, 19:30 IST
Last Updated 5 ಡಿಸೆಂಬರ್ 2023, 19:30 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದ ವೈಯನಾಡ್‌ನ ಮೂನ್ನನಕುಜಿ ಗ್ರಾಮದ ಶತಾಯುಷಿ ಪಾರುಕುಟ್ಟಿಯಮ್ಮ ಎಂಬುವರು ಸೋಮವಾರ ಶಬರಿಮಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಈ ವೃದ್ಧೆಯು ತನ್ನ ಮೊಮ್ಮಗ ಮತ್ತು ಆತನ ಮಕ್ಕಳ ಸಮೇತ ಶಬರಿಮಲೆಗೆ ಭೇಟಿ ನೀಡಿದರು. ದೇಗುಲವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಹಾಗಾಗಿ, ದೇವಸ್ಥಾನದ ಆಡಳಿತ ಮಂಡಳಿಯು ಪಾರುಕುಟ್ಟಿಯಮ್ಮ ಅವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಹದಿನೆಂಟು ಮೆಟ್ಟಿಲುಗಳನ್ನು ಏರಿದ ಅವರು ದೇವರ ದರ್ಶನ ಪಡೆದರು. ಬಳಿಕ ಮಂಡಳಿಯಿಂದ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.  

ಪಾರುಕುಟ್ಟಿಯಮ್ಮ ಜನಿಸಿದ್ದು 1923ರಲ್ಲಿ. ಶಬರಿಮಲೆಗೆ ಭೇಟಿ ನೀಡುವುದು ಅವರ ಬಾಲ್ಯದ ಕನಸಾಗಿತ್ತು. ಆದರೆ, ಅದು ಈಡೇರಿಲಿಲ್ಲ. ಹಾಗಾಗಿ, ಎಳವೆಯಲ್ಲಿ ಕಂಡಿದ್ದ ಕನಸನ್ನು ಬಾಳಿನ ಮುಸ್ಸಂಜೆಯಲ್ಲಿ ಈಡೇರಿಸಿಕೊಂಡಿದ್ದಾರೆ.

‘ದರ್ಶನಕ್ಕೆ ಅವಕಾಶ ಕಲ್ಪಿಸಿದವರಿಗೆ ಒಳ್ಳೆಯದಾಗಲಿ. ನನ್ನ ಮೊಮ್ಮಗನ ಪತ್ನಿ ಇಸ್ರೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಕದನ ಶೀಘ್ರವೇ ಮುಕ್ತಾಯಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದು  ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT