ಬೆಂಗಳೂರು: ಕಳೆದ ವರ್ಷ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶ ಹಾಗೂ ಆಸ್ತಿಪಾಸ್ತಿ ನಷ್ಟವಾಗಿತ್ತು. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 629 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ವಿಷಯವನ್ನು ಟ್ವಿಟರ್ನಲ್ಲಿ ಇಂದು ತಿಳಿಸಿದ್ದಾರೆ. ಎಸ್ಡಿಆರ್ಎಫ್ ನಿಧಿಗೆ ಈ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರಕ್ಕೂ ಕೂಡ 701 ಕೋಟಿ ನೆರವು ಘೋಷಣೆಯಾಗಿದೆ.

2020 ರಲ್ಲಿ ರಾಜಸ್ತಾನದಲ್ಲಿ ಅನಾವೃಷ್ಠಿಗೆ ತುತ್ತಾದ ರೈತರಿಗೆ ನೆರವು ನೀಡಲು ಎಸ್ಡಿಆರ್ಎಫ್ಗೆ 113 ಕೋಟಿ ರೂಪಾಯಿ ನೆರವು ನೀಡಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.

2020–21 ರ ರಾಭಿ ಮತ್ತು ಖಾರೀಪ್ ಅವಧಿಯಲ್ಲಿ ಬೆಳೆ ನಷ್ಟ ಅನುಭವಿಸಿದ ಮಹಾರಾಷ್ಟ್ರದ 11.43 ಲಕ್ಷ ರೈತರಿಗೆ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 750 ಕೋಟಿ ಬೆಳೆವಿಮೆ ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈತರ ಕಲ್ಯಾಣಕ್ಕಾಗಿ ಭಾರತ ಸರ್ಕಾರ ಸದಾ ಸಿದ್ಧ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಭಿಕ್ಷುಕರಿಗೆ ಪುನರ್ವಸತಿ, ಲಸಿಕೆ ನೀಡುವಂತೆ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.