ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ನೇತಾಜಿ ಚಿತಾಭಸ್ಮ ತರಲು ಒತ್ತಾಯಿಸಿ ಚಳವಳಿ: ಚಂದ್ರ ಬೋಸ್

Last Updated 26 ಆಗಸ್ಟ್ 2022, 16:25 IST
ಅಕ್ಷರ ಗಾತ್ರ

ನವದೆಹಲಿ: ಜಪಾನ್‌ನಲ್ಲಿರುವ ನೇತಾಜಿ ಸುಭಾಶ್‌ಚಂದ್ರಬೋಸ್‌ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು ಎಂದು ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್‌ ಬೋಸ್‌ ಒತ್ತಾಯಿಸಿದ್ದಾರೆ. ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್‌ನಲ್ಲಿ ಚಳವಳಿ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸದ್ಯ, ಜಪಾನ್‌ನ ರೆಂಕೋಜಿ ದೇವಾಲಯದಲ್ಲಿ ನೇತಾಜಿ ಚಿತಾಭಸ್ಮವನ್ನು ಇರಿಸಲಾಗಿದೆ.

‘ತಂದೆಯವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು ಎಂಬುದು ನೇತಾಜಿ ಅವರ ಮಗಳು ಅನಿತಾ ಬೋಸ್‌ ಫಾಫ್‌ ಅವರ ಬೇಡಿಕೆಯೂ ಆಗಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ಅವರು ಹೇಳಿದ್ದಾರೆ.

‘ನಿಷ್ಠಾವಂತ ಹಿಂದೂ ಆಗಿದ್ದ ನೇತಾಜಿ, ಇತರ ಧರ್ಮಗಳನ್ನು ಗೌರವಿಸುತ್ತಿದ್ದರು. ಚಿತಾಭಸ್ಮದ ಒಂದು ಭಾಗವನ್ನು ಅವರ ಮಗಳಿಂದ ಗಂಗೆಯಲ್ಲಿ ವಿಸರ್ಜನೆ ಮಾಡಿಸಬೇಕು. ಒಂದಿಷ್ಟು ಭಾಗವನ್ನು ನವದೆಹಲಿಯಲ್ಲಿರುವ ಅವರ ಸ್ಮಾರಕದಲ್ಲಿರಿಸಬೇಕು ಹಾಗೂ ಉಳಿದದ್ದನ್ನು ಮಣಿಪುರದ ಮೊಯಿರಾಂಗ ನಗರದಲ್ಲಿ ಸಂರಕ್ಷಿಸಿಡಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT