ವಿಶಾಖಪಟ್ಟಣ: ‘ಕೆಲವು ದೇಶಗಳಲ್ಲಿ ವಯಸ್ಸಾದವರ ಜನಸಂಖ್ಯೆಯೇ ಅಧಿಕವಾಗಿದೆ. ಅವರಲ್ಲಿ ಆಧುನಿಕ ತಂತ್ರಜ್ಞಾನ ಇರಬಹುದಾದರೂ ಅದನ್ನು ಬಳಸುವವರೇ ಇಲ್ಲ. ಭಾರತದ ಸ್ಥಿತಿ ಹಾಗಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತಿಗೇ ನಾವು ಮಾತ್ರವೇ ಸೇವೆ ಒದಗಿಸಬಲ್ಲೆವು’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.

ಇಲ್ಲಿ ನಡೆದ ‘ರಾಷ್ಟ್ರೀಯ ಇ–ಆಡಳಿತ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ತಂತ್ರಜ್ಞಾನವನ್ನು ಬಳಸಲು ಬಾರದೇ ಯುರೋಪ್, ಜಪಾನ್ ಮತ್ತು ಇತರ ದೇಶಗಳಲ್ಲಿ ನರ್ಸ್ ಮತ್ತು ವೈದ್ಯರ ಕೊರತೆ ಇದೆ. ಈ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಭವಿಷ್ಯ ಬೇರೆಯದೇ ಇದೆ. ನಾವು ಜಗತ್ತಿಗೇ ತಂತ್ರಜ್ಞಾನ ಒದಗಿಸಲಿದ್ದೇವೆ’ ಎಂದರು.

‘ದಕ್ಷಿಣ ಏಷ್ಯಾ ದೇಶಗಳಲ್ಲಿ ವೃದ್ಧರ ಸಂಖ್ಯೆಯ ಹೆಚ್ಚಳದ ಸಮಸ್ಯೆ ಇಲ್ಲ. ಯುವ ಜನಸಂಖ್ಯೆಯೇ ನಮಗೆ ದೊಡ್ಡ ಅನುಕೂಲತೆ. ನಮ್ಮ ದೇಶದಲ್ಲಿ 143 ಕೋಟಿ ಜನಸಂಖ್ಯೆ ಇದೆ. ದೊಡ್ಡ ಮಾರುಕಟ್ಟೆ ಇದೆ. ಆದರೆ, ಚೀನಾದಲ್ಲಿ ಕೇವಲ 130 ಕೋಟಿ ಜನಸಂಖ್ಯೆ ಇದೆಯಷ್ಟೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ‘ಸ್ವದೇಶಿ ಚಳವಳಿ’ಯನ್ನು ಶ್ಲಾಘಿಸಿದ ನಾಯ್ದ, ‘ಮೊದಲು ‘ಸ್ವದೇಶಿ’ಯ ಕುರಿತು ಗಮನ ಕೇಂದ್ರೀಕರಿಸಿದರೆ ನಾವು ದೊಡ್ಡ ದೊಡ್ಡ ಬ್ರ್ಯಾಂಡ್ಗಳನ್ನೇ ಹುಟ್ಟುಹಾಕಬಹುದು. ಬಳಿಕ ನಾವು ಮಾರುಕಟ್ಟೆ ವಿಸ್ತರಿಸಿಕೊಳ್ಳಬೇಕು. ಆಗ ಜಗತ್ತಿನ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಸಾಧ್ಯ. ಇದಕ್ಕೆ ಐಬಿಎಂ ಮತ್ತು ಟಿಸಿಎಸ್ ಕಂಪನಿಗಳು ಸಹಕಾರ ನೀಡಲಿವೆ’ ಎಂದರು.

‘ಭಾರತವು ಕ್ವಾಂಟಮ್ ವ್ಯಾಲಿ’

ಈಗ ಕ್ವಾಂಟಮ್ ಕಂಪ್ಯೂಟರ್ಗಳು ಬರಲಿವೆ. ನಾವು ಇದನ್ನು ಆರಂಭಿಸಿದ್ದೇವೆ. ಇನ್ನು ಎರಡು ವರ್ಷಗಳಲ್ಲಿ ಭಾರತವು ಈ ಕಂಪ್ಯೂಟರ್ಗಳನ್ನು ರಫ್ತು ಮಾಡಲಿದೆ. ದೇಶೀಯ ಬೇಡಿಕೆಯನ್ನೂ ಪೂರೈಸಲಿದೆ. ಅಮೆರಿಕದ ಬಳಿ ಸಿಲಿಕಾನ್ ವ್ಯಾಲಿ ಇದ್ದರೆ ಭಾರತದ ಬಳಿ ಕ್ವಾಂಟಮ್ ವ್ಯಾಲಿ ಇದೆ. ಅದು ಅಮರಾವತಿಯಾಗಲಿದೆ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.