ದಂತೇವಾಡ (ಛತ್ತೀಸಗಢ): ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ 37 ನಕ್ಸಲರು ಅಧಿಕಾರಿಗಳ ಮುಂದೆ ಭಾನುವಾರ ಶರಣಾಗಿದ್ದಾರೆ. ಇವರಲ್ಲಿ 27 ಜನರ ಸುಳಿವು ನೀಡಿದವರಿಗೆ ಒಟ್ಟಾರೆ ₹65 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಿದ ಪುನರ್ವಸತಿ ಯೋಜನೆಯಡಿ 12 ಮಹಿಳೆಯರು ಸೇರಿದಂತೆ ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಆರ್ಫಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ತಿಳಿಸಿದ್ದಾರೆ.

‘ಶರಣಾದವರ ಪೈಕಿ ಅನಿತಾ, ಗೀತಾ, ರಂಜನ್ ಮತ್ತು ಭೀಮ ಅವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಸರ್ಕಾರದ ಪುನರ್ವಸತಿ ನೀತಿಯಡಿ ಶರಣಾದ ನಕ್ಸಲರಿಗೆ ಇತರ ಸೌಲಭ್ಯಗಳೊಂದಿಗೆ ತಲಾ ₹50,000 ಸಹಾಯಧನ ನೀಡಲಾಗುವುದು’ ಎಂದು ಅವರು ಹೇಳಿದರು.
.ಆಂಧ್ರಪ್ರದೇಶ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಮದ್ವಿ ಹಿದ್ಮಾ ಸೇರಿ 6 ಮಂದಿ ಹತ್ಯೆ.ಆಂಧ್ರಪ್ರದೇಶ: ₹25 ಲಕ್ಷ ಇನಾಮು ಘೊಷಣೆಯಾಗಿದ್ದ ನಕ್ಸಲ್ ದಂಪತಿ ಶರಣು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.