ಬಿಜಾಪುರ್: ಪೊಲೀಸರಿಗೆ ಶರಣಾಗಿದ್ದ ಇಬ್ಬರು ಮಾವೋವಾದಿಗಳ ಸಂಬಂಧಿಕರು ಮತ್ತು 13 ವರ್ಷದ ಬಾಲಕನನ್ನು ಛತ್ತೀಸಗಡದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

ಗಂಗಲೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪೆದ್ದಕೊರ್ಮಾ ಗ್ರಾಮದಲ್ಲಿ ಜುಗ್ನು ಮೋಡಿಯಮ್ (45), ಸೋಮ ಮೋಡಿಯಮ್ (21 ಮತ್ತು ಅನಿಲ್ ಮಾದ್ವಿ (13) ಎಂಬುವರ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಜುಗ್ನು ಮತ್ತು ಸೋಮ ಇತ್ತೀಚೆಗಷ್ಟೇ ಶರಣಾಗಿದ್ದ ಹಿರಿಯ ಮಾವೋವಾದಿ ದಿನೇಶ್ ಮೋಡಿಯಮ್ ಅವರ ಸಂಬಂಧಿಕರು ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ರಾಜ್ ತಿಳಿಸಿದ್ದಾರೆ.

ಸೋಮ ಕಾಲೇಜಿಗೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹಾಗೂ ಕಾನ್ಸ್ಟೆಬಲ್ ಹುದ್ದೆಯ ಪರೀಕ್ಷೆಗೂ ಸಜ್ಜಾಗುತ್ತಿದ್ದ. ಅನಿಲ್ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತನಿಗೆ ವೈದ್ಯನಾಗುವ ಆಸೆ ಇತ್ತು ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ಸುಮಾರು 70–80 ಮಂದಿ ನಕ್ಸಲರು ಮಂಗಳವಾರ ಗ್ರಾಮಕ್ಕೆ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬುಡಕಟ್ಟು ಕಲ್ಯಾಣ ಸಂಸ್ಥೆ ಸರ್ವ ಆದಿವಾಸಿ ಸಮಾಜ ಘಟನೆಯನ್ನು ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.