ನವದೆಹಲಿ: ಅಮೆರಿಕದ ಟ್ರಂಪ್ ಆಡಳಿತವು ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸುವುದನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ. ಏಕೆಂದರೆ, ಅದು ಅನ್ಯಾಯ ಮತ್ತು ಅಸಮಂಜಸವಾದದ್ದಾಗಿದೆ. ಇದನ್ನು ಒಟ್ಟಾಗಿ ಎದುರಿಸಲು ಭಾರತ ಮತ್ತು ಚೀನಾ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಬೇಕು ಎಂದು ಭಾರತದ ಚೀನಾ ರಾಯಭಾರಿ ಷು ಫೀಹಾಂಗ್ ಹೇಳಿದ್ದಾರೆ.

ಭಾರತ ಮತ್ತು ಚೀನಾ ಎರಡೂ ಭಯೋತ್ಪಾದನೆಯಿಂದ ಸಂತ್ರಸ್ತ ದೇಶಗಳಾಗಿವೆ. ಭಾರತ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಎಂದು ಷು ಹೇಳಿದರು.

ಜಪಾನ್ ವಿರುದ್ಧ ಚೀನಾದ ವಿಜಯದ 80ನೇ ವಾರ್ಷಿಕೋತ್ಸವವನ್ನು ಗುರುತಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ನಂತರ ಅವರು ಭಾರತದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದರು.

ಗಡಿ ಸಮಸ್ಯೆಗಳ ಕುರಿತು ಭಾರತ ಮತ್ತು ಚೀನಾ ನಡುವೆ ಪ್ರಮುಖ ಒಮ್ಮತಕ್ಕೆ ಬರಲಾಗಿದೆ. ಪಾಕಿಸ್ತಾನವನ್ನು ಉಲ್ಲೇಖಿಸಿ ನಮ್ಮ ನಡುವಿನ ದ್ವಿಪಕ್ಷೀಯ ಸಂಬಂಧವು ಮೂರನೇ ವ್ಯಕ್ತಿಯಿಂದ ಪ್ರಭಾವಿತವಾಗಿಲ್ಲ ಎಂದು ಷು ಸ್ಪಷ್ಟಪಡಿಸಿದರು.

ತಮ್ಮ ಭಾಷಣದಲ್ಲಿ ಷು, ಅಮೆರಿಕದ ಸುಂಕ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ವಿವಿಧ ದೇಶಗಳಿಂದ ಅತಿಯಾದ ಆದಾಯ ಮಾಡಿಕೊಳ್ಳಲು ಅಮೆರಿಕವು ಸುಂಕಗಳನ್ನು ಒಂದು ರೀತಿಯ ಆಯುಧವಾಗಿ ಬಳಸುತ್ತಿದೆ. ಎರಡು ಪ್ರಮುಖ ಆರ್ಥಿಕತೆಗಳಾದ ಭಾರತ ಮತ್ತು ಚೀನಾ, ಪರಿಸ್ಥಿತಿಯನ್ನು ನಿಭಾಯಿಸಲು ಪರಸ್ಪರ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

‘ವ್ಯಾಪಾರ ಯುದ್ಧವನ್ನು ಅಮೆರಿಕ ಪ್ರಾರಂಭಿಸಿದೆ. ಅಂತರರಾಷ್ಟ್ರೀಯ ವ್ಯಾಪಾರವು ಪರಸ್ಪರ ಪೂರಕವಾಗಿರಬೇಕು ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕೆ ಕಾರಣವಾಗಬೇಕು. ಅಮೆರಿಕವು ಮುಕ್ತ ವ್ಯಾಪಾರದಿಂದ ದೀರ್ಘಕಾಲದಿಂದ ಲಾಭ ಪಡೆದಿದೆ. ಆದರೆ, ಈಗ ಅದು ಸುಂಕವನ್ನು ಒಂದು ರೀತಿಯ ಆಯುಧ ಅಥವಾ ಸಾಧನವಾಗಿ ಬಳಸುತ್ತಿದೆ’ಎಂದು ಅವರು ಹೇಳಿದ್ದಾರೆ.

‘ಅಮೆರಿಕವು ಭಾರತದ ಮೇಲೆ ಶೇ50 ರಷ್ಟು ಸುಂಕವನ್ನು ವಿಧಿಸುತ್ತಿದೆ. ಇದು ಅನ್ಯಾಯ, ಅಸಮಂಜಸ. ಚೀನಾ ಅದನ್ನು ದೃಢವಾಗಿ ವಿರೋಧಿಸುತ್ತದೆ. ಈ ಬೆದರಿಕೆಯನ್ನು ಹೇಗೆ ಎದುರಿಸಬೇಕೆಂದು ಭಾರತ ಮತ್ತು ಚೀನಾ ಜಂಟಿಯಾಗಿ ಚರ್ಚಿಸಬೇಕು’ಎಂದಿದ್ದಾರೆ.

ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಎರಡೂ ದೇಶಗಳು ಸಹಕಾರವನ್ನು ಹೆಚ್ಚಿಸಬೇಕು ಎಂದು ರಾಯಭಾರಿ ಹೇಳಿದ್ದಾರೆ.

‘ನಮ್ಮ ಎರಡೂ ದೇಶಗಳಲ್ಲಿ 2.8 ಶತಕೋಟಿ ಜನರಿದ್ದಾರೆ. ನಮ್ಮವು ಬೃಹತ್ ಗಾತ್ರದ ಆರ್ಥಿಕತೆಗಳಾಗಿವೆ. ನಮ್ಮಲ್ಲಿ ಬೃಹತ್ ಮಾರುಕಟ್ಟೆಗಳಿವೆ ಮತ್ತು ನಮ್ಮಲ್ಲಿ ಕಷ್ಟಪಟ್ಟು ದುಡಿಯುವ ಜನರಿದ್ದಾರೆ. ನಮ್ಮ ಆರ್ಥಿಕತೆಗಳು ಪೂರಕವಾಗಿವೆ’ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.