‘ಸಂವಿಧಾನವೇ ಪರಮಗ್ರಂಥ’
ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸದ ಹೊರತು ರಾಜಕೀಯ ಸಮಾನತೆಗೆ ಬೆಲೆ ಇರುವುದಿಲ್ಲ ಎಂಬ ಅಂಬೇಡ್ಕರ್ ಹೇಳಿಕೆಯನ್ನು ಸ್ಮರಿಸಿದ ಸಿಜೆಐ, ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಧರ್ಮ ಗ್ರಂಥಗಳಿವೆ. ಆದರೆ, ಭಾರತೀಯರಾದ ನಮಗೆ ಸಂವಿಧಾನವೇ ಪರಮ ಗ್ರಂಥ. ಸಂವಿಧಾನಕ್ಕೇ ನಮ್ಮ ನಿಷ್ಠೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು’ ಎಂದು ಸಲಹೆ ನೀಡಿದರು.