ನವದೆಹಲಿ: ಬಿ.ಆರ್. ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ 6 ತಿಂಗಳಲ್ಲಿ ದೇಶದ ವಿವಿಧ ಹೈಕೋರ್ಟ್ಗಳಿಗೆ ಪರಿಶಿಷ್ಟ ಜಾತಿ ವರ್ಗದಿಂದ 10 ಮಂದಿ ಮತ್ತು ಇತರ ಹಿಂದುಳಿದ ವರ್ಗಗಳಿಂದ 11 ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.

ದೇಶದ ಮೊದಲ ಬೌದ್ಧ ಮತ್ತು ಎರಡನೇ ದಲಿತ ಸಿಜೆಐ ಆಗಿರುವ ಗವಾಯಿ ಅವರು, ಸುಪ್ರೀಂ ಕೋರ್ಟ್ನ ಮೂವರು ಸದಸ್ಯರ ಕೊಲಿಜಿಯಂನ ನೇತೃತ್ವ ವಹಿಸಿದ್ದರು. ಈ ಅವಧಿಯಲ್ಲಿ ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರ್ಕಾರಕ್ಕೆ 129 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 93 ಮಂದಿ ನ್ಯಾಯಮೂರ್ತಿಗಳ ನೇಮಕಕ್ಕೆ ಅನುಮೋದನೆ ಸಿಕ್ಕಿತ್ತು.
.1st ರ್ಯಾಂಕ್ ಪಡೆದವರು ಲಾಯರ್ ಆದರು, 3ನೇ ರ್ಯಾಂಕ್ನ ನಾನು CJI: ನ್ಯಾ. ಗವಾಯಿ.
ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ, ವಿಜಯ್ ಬಿಷ್ಣೋಯಿ, ಎ.ಎಸ್. ಚಂದೂರ್ಕರ್, ಅಲೋಕ್ ಆರಾಧೆ ಮತ್ತು ವಿಪುಲ್ ಮನುಭಾಯಿ ಪಂಚೋಲಿ-ಈ ಐವರು ಗವಾಯಿ ಅವರ ಅಧಿಕಾರಾವಧಿಯಲ್ಲಿಯೇ ಸುಪ್ರೀಂ ಕೋರ್ಟ್ಗೆ ನೇಮಿಸಲಾಗಿದೆ.

ಮೇ 14ರಂದು ಗವಾಯಿ ಅವರು, ಮುಖ್ಯ ನ್ಯಾಯಮೂರ್ತಿಯಾದ ಬಳಿಕ ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ನ್ಯಾಯಮೂರ್ತಿಗಳ ನೇಮಕಾತಿ ವಿವರಗಳ ಪ್ರಕಾರ, ಹೈಕೋರ್ಟ್ಗೆ ಸರ್ಕಾರವು ಅನುಮೋದಿಸಿದ 93 ಹೆಸರುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ 13 ಮಂದಿ ನ್ಯಾಯಮೂರ್ತಿಗಳು ಮತ್ತು 15 ಮಹಿಳಾ ನ್ಯಾಯಮೂರ್ತಿಗಳು ಸೇರಿದ್ದಾರೆ.

ಈ ಪೈಕಿ ಐವರು ಮಾಜಿ ಅಥವಾ ಹಾಲಿ ನ್ಯಾಯಮೂರ್ತಿಗಳ ಸಂಬಂಧಿಗಳು. 49 ಮಂದಿ ವಕೀಲ ಸಮುದಾಯದಿಂದ ನೇಮಿಸಲಾಗಿದೆ. ಉಳಿದವರು ಸೇವೆಯಿಂದ ಪದೋನ್ನತಿ ಹೊಂದಿದವರು.

ಸಿಜೆಐ ಗವಾಯಿ ಅವರು ನವೆಂಬರ್ 23ರಂದು (ಭಾನುವಾರ) ನಿವೃತ್ತಿ ಹೊಂದಲಿದ್ದಾರೆ. ಶುಕ್ರವಾರ ಅವರು ತಮ್ಮ ಕೊನೆಯ ಕಲಾಪ ನಡೆಸಿದ್ದಾರೆ. ಗವಾಯಿ ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನವೆಂಬರ್ 24ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
.ಸಂಪೂರ್ಣ ತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ: ವಿದಾಯದ ಕಲಾಪದಲ್ಲಿ CJI ಗವಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.