ಅಹಮದಾಬಾದ್: ಮೂರನೇ ತರಗತಿ ಓದುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಹೃದಯ ಸ್ತಂಭನದಿಂದ ಮೃತಪಟ್ಟಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಅನುಮಾನ ವ್ಯಕ್ತಪಡಿಸಿದ್ದಾರೆ.

ಥಾಲ್ತೇಜ್ ಪ್ರದೇದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಗಾರ್ಗಿ ರಣ್ಪಾರಾ ಎಂದು ಗುರುತಿಸಲಾಗಿದೆ.

'ಇಂದಿನಂತೆ ಶಾಲೆಗೆ ಬಂದ ಗಾರ್ಗಿ ತನ್ನ ತರಗತಿಯತ್ತ ಹೋಗುತ್ತಿದ್ದಳು. ಈ ಮಧ್ಯೆ ಆಕೆ ಕಾರಿಡಾರ್ ಬಳಿಯ ಕುರ್ಚಿಯ ಮೇಲೆ ಕುಳಿತು ವಿಶಾಂತ್ರಿ ಪಡೆದಿದ್ದಾಳೆ. ಆಕೆ ಆಯಾಸಗೊಂಡಂತೆ ಕಂಡು ಬಂದಿದ್ದಳು' ಎಂದು ಶಾಲೆಯ ಮುಖ್ಯಶಿಕ್ಷಕಿ ಶರ್ಮಿಷ್ಠ ಸಿನ್ಹಾ ತಾವು ಕಂಡ ಸಿಸಿಟಿವಿ ದೃಶ್ಯಗಳನ್ನು ವಿವರಿಸಿದ್ದಾರೆ.
.ನಮ್ಮ ಕೆಲಸಕ್ಕೆ ಬೆಲೆ ಕಟ್ಟುತ್ತೀರಾ..?: ಆಶಾ ಕಾರ್ಯಕರ್ತೆಯರ ಮನದಾಳ.VIDEO: ಮಹಾಕುಂಭಮೇಳಕ್ಕೆ 4.75 ಲಕ್ಷ ಚದರ ಅಡಿಯಲ್ಲಿ ಬೃಹತ್ ಪೆಂಡಾಲ್ .
ಬಾಲಕಿ ಅಸ್ವಸ್ಥಗೊಂಡು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಗೆ ಶಿಕ್ಷಕರು ಸಿಪಿಆರ್ ಮಾಡಿದ್ದಾರೆ. ಬಳಿಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ ಎಂದು ಶಿಕ್ಷಕಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಾಲಕಿ ಹೃದಯ ಸ್ತಂಭನದಿಂದ ಮೃತಪಟ್ಟಿರಬಹುದು ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿಯಲು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
.ರಾಜ್ಯ ಸರ್ಕಾರದ ಪ್ರತಿ ಸಹಿಯೂ ಮಾರಾಟಕ್ಕಿದೆ: ಕುಮಾರಸ್ವಾಮಿ ಆರೋಪ.ನಾನೂ ಮನುಷ್ಯ; ತಪ್ಪಾಗಬಹುದು; Podcast ಪದಾರ್ಪಣೆ ಮಾಡಿದ ಪ್ರಧಾನಿ ಮೋದಿ ಮಾತು.Video: ವಂದೇ ಭಾರತ್ 2.0 ರೈಲು ನಿರ್ಮಾಣ ಕಾಮಗಾರಿ ವೀಕ್ಷಿಸಿದ ಸಚಿವ ಅಶ್ವಿನಿ.ಲಾಸ್ ಏಂಜಲೀಸ್ ಕಾಳ್ಗಿಚ್ಚು: 10 ಮಂದಿ ಸಾವು; ಅವಶೇಷಗಳ ಬಳಿ ಹೆಚ್ಚಿದ ಲೂಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.