ಬೆಂಗಳೂರು: ತಮಿಳುನಾಡಿನ ವಂಡಲೂರು ಜೈವಿಕ ಉದ್ಯಾನದಲ್ಲಿ ಕೋವಿಡ್ 19 ಸೋಂಕಿನಿಂದ ಸಿಂಹಿಣಿಯೊಂದು ಮೃತಪಟ್ಟು, ಉಳಿದ ಸಿಂಹಗಳಿಗೆ ಸೋಂಕು ಹರಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ಎಲ್ಲ ಹುಲಿಯೋಜನೆ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

ವಂಡಲೂರಿನ ಜೈವಿಕ ಉದ್ಯಾನದ ಸಿಂಹಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಈ ಸೋಂಕು ದೊಡ್ಡಮಟ್ಟದಲ್ಲಿ ವನ್ಯಜೀವಿಗಳಿಗೂ ಮನುಷ್ಯರಿಂದ ಹರಡುತ್ತಿರುವುದು ಖಾತ್ರಿಯಾಗಿದೆ. ಹುಲಿಯೋಜನೆ ಪ್ರದೇಶಗಳಲ್ಲೂ ಇದೇ ರೀತಿ ಸೋಂಕು ಹರಡುವ ಅಪಾಯವಿದೆ. ಹಾಗಾಗಿ ತಕ್ಷಣದಿಂದಲೇ ತಮ್ಮ ವ್ಯಾಪ್ತಿಯ ಹುಲಿ ಯೋಜನೆ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಸೋಮವಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(ಎನ್‌ಟಿಸಿಎ) ಡಿಐಜಿ ರಾಜೇಂದ್ರ ಜಿ. ಗರ್ವದ್ ಅವರು ಎಲ್ಲ ರಾಜ್ಯಗಳ ವನ್ಯಜೀವಿ ಮುಖ್ಯ ಪರಿಪಾಲಕರಿಗೆ ಆದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.