ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ ಎಂಬ ಟ್ರಂಪ್ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ‘ವಾಷಿಂಗ್ಟನ್ ಡಿಸಿಯಲ್ಲಿರುವ ಉತ್ತಮ ಗೆಳೆಯ ಶತಕದ ಸನಿಹದಲ್ಲಿದ್ದಾನೆ’ ಎಂದು ಗೇಲಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿರುವುದಾಗಿ ಸುಮಾರು 90 ಬಾರಿ ಹೇಳಿದ್ದ ಟ್ರಂಪ್, ವ್ಯಾಪಾರ ಒಪ್ಪಂದದ ನಂತರ ಇಂದು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಅಲ್ಲದೇ ಟ್ರುತ್ ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಹಂಚಿಕೊಂಡಿದ್ದರು.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ‘ತಾವೊಬ್ಬ ಸುಳ್ಳುಗಳ ಸರದಾರ, ಪೂರ್ವಾಗ್ರಹಗಳ ಉಗ್ರಾಣ, ಅಭದ್ರತೆಯ ಕಂತೆ ಎನ್ನುವುದನ್ನು ನಿನ್ನೆ ಸಂಜೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ತಮ್ಮನ್ನು ತಾವು ಮಹಾನ್ ವ್ಯಕ್ತಿ ಎಂದು ಘೋಷಿಸಿಕೊಳ್ಳುವುದಕ್ಕೆ ಅವರು ಮುಂದಾಗಿದ್ದರು. ಆದರೆ, ಅವರು ಹಾಗೆ ಮಾಡಿದಷ್ಟೂ ಅವರೊಬ್ಬ ಒಳ್ಳೆಯ ವ್ಯಕ್ತಿ ಅಲ್ಲ, ಎಂದಿಗೂ ಆಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.

‘97 ನಿಮಿಷಗಳ ಅವರ ಭಾಷಣ ಶೋಚನೀಯವಾಗಿತ್ತು. ರಾಜ್ಯಸಭೆಯಲ್ಲಿ ಸದಸ್ಯರು ಎತ್ತಿದ ಯಾವುದೇ ಗಂಭೀರ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಏತನ್ಮಧ್ಯೆ, ‘ವಾಷಿಂಗ್ಟನ್ ಡಿಸಿಯಲ್ಲಿರುವ ಅವರ ಉತ್ತಮ ಸ್ನೇಹಿತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ತಡೆಯಲು ಮಧ್ಯಪ್ರವೇಶಿಸಿದ್ದೆ ಎಂದು ಹೇಳುವ ಮೂಲಕ ಶತಕದ ಗಡಿ ತಲುಪುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಮೌನ ತಾಳಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.