ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ | ಭರವಸೆಗಳನ್ನು ಈಡೇರಿಸಿರುವ ಇತಿಹಾಸ ಕಾಂಗ್ರೆಸ್‌ಗಿಲ್ಲ: ಓವೈಸಿ

Published 17 ನವೆಂಬರ್ 2023, 14:25 IST
Last Updated 17 ನವೆಂಬರ್ 2023, 14:25 IST
ಅಕ್ಷರ ಗಾತ್ರ

ಹೈದರಾಬಾದ್‌: ನೀಡಿದ ಭರವಸೆಗಳನ್ನು ಈಡೇರಿಸಿರುವ ಇತಿಹಾಸ ಕಾಂಗ್ರೆಸ್‌ಗಿಲ್ಲ ಹಾಗೂ ಪಕ್ಷವು ಜನರಿಗೆ ಭರವಸೆಗಳನ್ನು ನೀಡುವ ಮೂಲಕ ದ್ರೋಹ ಮಾಡುತ್ತಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಐದು ಭರವಸೆಗಳನ್ನು ನೀಡಿರುವಂತೆ, ತೆಲಂಗಾಣದಲ್ಲಿಯೂ ಕಾಂಗ್ರೆಸ್‌ ಆರು ಚುನಾವಣಾ ಭರವಸೆಗಳನ್ನು ಘೋಷಿಸಿದ್ದು, ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಆರು ಖಾತರಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.

‘ಸದ್ಯ ಚುನಾವಣೆ ನಡೆಯುತ್ತಿರುವುದರಿಂದ, ಕಾಂಗ್ರೆಸ್‌ನವರು ಅವರಿಗೆ ಇಷ್ಟ ಬಂದಂತೆ ಭರವಸೆಗಳನ್ನು ನೀಡುತ್ತಿದ್ದಾರೆ. ಅವೆಲ್ಲ ತೆಲಂಗಾಣದಲ್ಲಿ ಜಾರಿಯಾಗುತ್ತದೋ ಇಲ್ಲವೋ ಎಂಬುದು ಬೇರೆ ವಿಚಾರ. ಆದರೆ, ಕರ್ನಾಟಕದಲ್ಲಿ ಗಮನಿಸಿದರೆ, ಕಾಂಗ್ರೆಸ್‌ ಭರವಸೆ ನೀಡಿದ ನಂತರ ಬಡ ಮಕ್ಕಳ ಸ್ಕಾಲರ್‌ಶಿಪ್‌ ಕಡಿತಗೊಳಿಸಲಾಗಿದೆ ಮತ್ತು ರೈತರಿಗೆ ಬೆಳೆ ಬೆಳೆಯಲು ವಿದ್ಯುತ್‌ ನೀಡುತ್ತಿಲ್ಲ. ಕಾಂಗ್ರೆಸ್‌ ಪಕ್ಷವು ಜನರನ್ನು ವಂಚಿಸಲು ಭರವಸೆಗಳನ್ನು ನೀಡುತ್ತದೆ ಎಂದು ಆರೋಪಿಸಿರುವ ಓವೈಸಿ, ನೀಡಿದ ಭರವಸೆಗಳನ್ನು ಈಡೇರಿಸಿರುವುದು ಕಾಂಗ್ರೆಸ್‌ ಇತಿಹಾಸದಲ್ಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅವಿಭಜಿತ ಆಂಧ್ರಪ್ರದೇಶದ ವಿಭಜನೆಯನ್ನು ಕಾಂಗ್ರೆಸ್‌ ಸರಿಯಾಗಿ ಮಾಡಲಿಲ್ಲ, ನದಿ ನೀರು ಹಂಚಿಕೆ ಮತ್ತು ಆಂದ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಆಸ್ತಿ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ ಎಂದು ಓವೈಸಿ ಆರೋಪಿಸಿದ್ದಾರೆ.

ತೆಲಂಗಾಣ ಚುನಾವಣೆಯಲ್ಲಿ ಎಐಎಂಐಎಂ ಪಕ್ಷವು ಸ್ಪರ್ಧಿಸುತ್ತಿರುವ ಎಲ್ಲಾ ಒಂಬತ್ತು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಓವೈಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

119 ಸದಸ್ಯ ಬಲ ಹೊಂದಿರುವ ತೆಲಂಗಾಣ ವಿಧಾನಸಭೆ ಚುನಾವಣೆಯು ನವೆಂಬರ್‌ 30 ರಂದು ನಡೆಯಲಿದ್ದು, ಡಿಸೆಂಬರ್‌ 3 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT