ಭಾರತದ ಆತ್ಮದ ದನಿಯಂತೆ: ರಾಹುಲ್
‘ಕಾಂಗ್ರೆಸ್ ಒಂದು ರಾಜಕೀಯ ಪಕ್ಷ ಮಾತ್ರವಲ್ಲ ಪ್ರತಿಯೊಬ್ಬ ದುರ್ಬಲ ಶೋಷಿತ ವ್ಯಕ್ತಿ ಹಾಗೂ ಶ್ರಮಜೀವಿಯ ಪರ ನಿಲ್ಲುವ ಭಾರತದ ಆತ್ಮದ ಧ್ವನಿಯೇ ಆಗಿದೆ’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು. ‘ದ್ವೇಷ ಅನ್ಯಾಯ ಹಾಗೂ ಸರ್ವಾಧಿಕಾರ ಧೋರಣೆಯಿಂದ ಸಂವಿಧಾನ ರಕ್ಷಿಸುವ ಸಲುವಾಗಿ ಮತ್ತಷ್ಟು ಪ್ರಬಲ ಹೋರಾಟ ನಡೆಸುವುದು ನಮ್ಮ ಅಚಲ ನಿರ್ಧಾರ’ ಎಂದು ಅವರು ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪ್ರತಿಯೊಬ್ಬ ಕಾಂಗ್ರೆಸ್ ಸದಸ್ಯಗೆ ಶುಭಾಶಯಗಳು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಾಗೂ ಸಂವಿಧಾನ ಪ್ರಜಾಪ್ರಭುತ್ವ ಜಾತ್ಯತೀತ ತತ್ವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಂತಹ ಮೌಲ್ಯಗಳನ್ನು ಗಟ್ಟಿಗೊಳಿಸುವುದಕ್ಕೆ ಭದ್ರ ತಳಪಾಯ ಹಾಕಿದ ಪರಂಪರೆಗೆ ಹಾಗೂ ಬಲಿದಾನಗಳಿಗೆ ಗೌರವ ಸಲ್ಲಿಸುವೆ’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.