ಕುಲ್ಗಾಮ್: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಜನಪರವಾಗಿದೆ. ಇದು ಬಿಜೆಪಿಯ ಶಕ್ತಿಗುಂದಿಸಿದ್ದು, ಹೀಗಾಗಿ ಹತಾಶೆಗೊಂಡು ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದರು.
.LS polls | ಕಾಶ್ಮೀರದ ಎಲ್ಲ ಕ್ಷೇತ್ರಗಳಲ್ಲಿ ಪಿಡಿಪಿ ಸ್ಪರ್ಧೆ: ಮೆಹಬೂಬಾ ಮುಫ್ತಿ.
‘ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ, ಮಹಿಳೆಯರಿಗೆ ಶೇ 50 ಮೀಸಲಾತಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಪ್ರಸ್ತಾಪ ಇದೆ. ಇದು ಬಿಜೆಪಿಯ ಧೈರ್ಯಗೆಡಿಸಿದೆ. ಇಂಡಿಯಾ ಮೈತ್ರಿಕೂಟ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

‘70 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಇಂಥ ಅದ್ಭುತ, ಜನಪರವಾದ ಪ್ರಣಾಳಿಕೆ ಬಂದಿದೆ. ಬಡವರ ಪರವಾಗಿ, ನಿರುದ್ಯೋಗಿ ಯುವಕರ ಪರವಾಗಿ ಹಾಗೂ ರೈತರ ಪರವಾಗಿ ಪ್ರಣಾಳಿಕೆ ಮಾತನಾಡುತ್ತಿದೆ. ಇದು ಬಿಜೆಪಿಗೆ ಭಯ ಉಂಟುಮಾಡಿದೆ. ಹೀಗಾಗಿ ಹಿಂದೂ–ಮುಸ್ಲಿಮರ ನಡುವೆ ಉದ್ವಿಗ್ನತೆ ಸೃಷ್ಠಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರ ಹತಾಶೆಯ ಪ್ರತಿಬಿಂಬ’ ಎಂದು ಅವರು ಹೇಳಿದರು.
.ಪೂಂಛ್ ಭೇಟಿಗೆ ತಡೆ: ಹೆದ್ದಾರಿಯಲ್ಲೇ ಮೆಹಬೂಬಾ ಮುಫ್ತಿ ಧರಣಿ.

ಮೆಹಬೂಬಾ ಅವರು ಅನಂತ್‌ನಾಗ್–ರಜೌರಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.
.ಜಮ್ಮು ಮತ್ತು ಕಾಶ್ಮೀರ ಬಿಜೆಪಿಯ ಪ್ರಯೋಗಾಲಯ: ಮೆಹಬೂಬಾ ಮುಫ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.