ಬೇಗುಸರಾಯ್(ಬಿಹಾರ): ಮನರೇಗಾ ಬದಲಿಗೆ ಜಾರಿಗೆ ತರಲಾಗಿರುವ ‘ವಿಬಿ ಜಿ ರಾಮ್ ಜಿ’ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಈ ಕಾಯ್ದೆಯಲ್ಲಿ ಭಗವಂತ ರಾಮನ ಹೆಸರನ್ನು ಸೇರಿಸಿರುವುದು ಕಾಂಗ್ರೆಸ್ಸಿಗರಿಗೆ ಸಮಸ್ಯೆಯಾಗಿದೆ ಎಂದು ಟೀಕಿಸಿದ್ದಾರೆ.

ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಬಿಹಾರದ ಬೇಗುಸರಾಯ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಉದ್ಯೋಗಕ್ಕಾಗಿ ವಿಕಸಿತ ಭಾರತದ ಗ್ಯಾರಂಟಿ, ಗ್ರಾಮಗಳಿಗೆ ಅಜೀವಿಕ ಮಿಷನ್, ರಾಮನ ಹೆಸರಿರುವ ಕಾರಣಕ್ಕೆ ವಿಬಿ ಜಿ ರಾಮ್ ಜಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ಕಾಂಗ್ರೆಸ್ಸಿಗರು ಸಮಾಜದ ಬಡವರು, ಸೌಲಭ್ಯ ವಂಚಿತ ಜನರಿಗೆ ಉದ್ಯೋಗ ಅಥವಾ ಕಲ್ಯಾಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರಿಗೆ ಏಕೈಕ ಸಮಸ್ಯೆಯೆಂದರೆ ಭಗವಂತ ರಾಮನ ಹೆಸರು’ ಎಂದು ಟೀಕಿಸಿದ್ದಾರೆ.

ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿಯನ್ನು 100 ರಿಂದ 125 ದಿನಕ್ಕೆ ವಿಸ್ತರಿಸುವುದು ‘ವಿಬಿ ಜಿ ರಾಮ್ ಜಿ’ ಕಾಯ್ದೆಯ ಗುರಿಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕೆಲಸದ ದಿನಗಳನ್ನು ಹೆಚ್ಚಿಸುವ ಕುರಿತಂತೆ ಕಾಂಗ್ರೆಸ್ ಯೋಚಿಸಲಿಲ್ಲ ಎಂದು ದೂಷಿಸಿದ್ದಾರೆ.

ಇತ್ತೀಚೆಗೆ, ಸಂಸತ್ತಿನ ಉಭಯ ನದನಗಳಲ್ಲಿ ಅಂಗೀಕಾರ ಪಡೆದ ‘ವಿಬಿ ಜಿ ರಾಮ್ ಜಿ’ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಉದ್ಯೋಗ ಖಾತ್ರಿಯನ್ನು 100ರಿಂದ 125ಕ್ಕೆ ಹೆಚ್ಚಳ ಮಾಡುವುದು ಗ್ರಾಮೀಣ ಜನರಿಗೆ ಜೀವನ ಭದ್ರತೆ, ಆದಾಯ ಸ್ಥಿರತೆ ನೀಡುತ್ತದೆ. ದೇಶದ ಗ್ರಾಮೀಣ ಜನರ ಸಬಲೀಕರಣ ಮತ್ತು ಬೆಳವಣಿಗೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಅವಿಶ್ರಾಂತ ದುಡಿಯುತ್ತಿದ್ದಾರೆ ಎಂದು ಹೇಳಿದರು.

ಯುಪಿಎ ಅವಧಿಯ 10 ವರ್ಷಗಳಲ್ಲಿ ಮನರೇಗಾ ಯೋಜನೆಯಡಿ ರಾಜ್ಯಗಳಿಗೆ ಕೇವಲ ₹2.13 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿತ್ತು. 2014ರಿಂದ ಎನ್ಡಿಎ ಸರ್ಕಾರ ₹8.14 ಲಕ್ಷ ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.