ನವದೆಹಲಿ: ಮತ ಕಳವು ಹಾಗೂ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್ ಭವನದಿಂದ ಚುನಾವಣಾ ಆಯೋಗದವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆನಿರತ ಸಂಸದರನ್ನು ಪೊಲೀಸರು ಬಂಧಿಸಿದರು.

ಸಂಸದರು ಮುಂದೆ ಸಾಗುವುದನ್ನು ತಡೆಯಲು ಪೊಲೀಸರು ಪಿಟಿಐ ಕಟ್ಟಡದ ಹೊರಗೆ ಬ್ಯಾರಿಕೇಡ್ಗಳನ್ನು ಹಾಕಿದರು. ಪೊಲೀಸರು ತಡೆದಿದ್ದರಿಂದ ಆಕ್ರೋಶಗೊಂಡ ಅನೇಕ ಸಂಸದರು ರಸ್ತೆಯ ಮೇಲೆ ಕುಳಿತು ಘೋಷಣೆಗಳನ್ನು ಕೂಗಿದರು. ಟಿಎಂಸಿಯ ಮಹುವಾ ಮೊಯಿತ್ರಾ, ಕಾಂಗ್ರೆಸ್ನ ಸಂಜನಾ ಜಾಟವ್ ಮತ್ತು ಜ್ಯೋತಿಮಣಿ ಸೇರಿದಂತೆ ಕೆಲವು ಮಹಿಳಾ ಸಂಸದರು ಬ್ಯಾರಿಕೇಡ್ ಹತ್ತಿ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಲವು ಸಂಸದರು ಕನ್ನಡದಲ್ಲಿಯೂ ಘೋಷಣೆಗಳನ್ನು ಕೂಗಿದರು. ಇದಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಧ್ವನಿಗೂಡಿಸಿದರು.

ಬೆಳಿಗ್ಗೆ 11̤.30ಕ್ಕೆ ಸಂಸತ್ತಿನ ಮಕರ ದ್ವಾರದಿಂದ ಸಂಸದರು ವಿವಿಧ ಭಾಷೆಗಳಲ್ಲಿ ಮತ ಕಳ್ಳತನದ ಪೋಸ್ಟರ್ಗಳನ್ನು ಹಿಡಿದು ಮೆರವಣಿಗೆ ಪ್ರಾರಂಭಿಸಿದರು. ‘ಮತದಾರರ ಪಟ್ಟಿ ಪರಿಷ್ಕರಣೆ ರದ್ದು ಮಾಡಿ’, ‘ಮತಕಳವು ನಿಲ್ಲಿಸಿ’, ‘ಎಸ್ಐಆರ್+ಮತ ಕಳ್ಳತನ=ಪ್ರಜಾಪ್ರಭುತ್ವದ ಕೊಲೆ’ ಮತ್ತಿತರ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಸಂದರ್ಭದಲ್ಲಿ ಮಹುವಾ ಮೊಯಿತ್ರಾ ಮತ್ತು ಮಿತಾಲಿ ಬಾಗ್ ಮೂರ್ಛೆ ಹೋದರು. ಅವರನ್ನು ಕರೆದೊಯ್ಯಲು ರಾಹುಲ್ ಸಹಾಯ ಮಾಡಿದರು.

ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಕೆ.ಸಿ. ವೇಣುಗೋಪಾಲ್, ತಿರುಚ್ಚಿ ಶಿವ, ಡೆರೆಕ್ ಒಬ್ರಯಾನ್, ಮನೋಜ್ ಕೆ. ಝಾ, ಮಾಣಿಕ್ಕಂ ಟ್ಯಾಗೋರ್, ಸುಪ್ರಿಯಾ ಸುಳೆ ಮತ್ತು ಕನಿಮೊಳಿ ಸೇರಿದಂತೆ ಇತರ ಸಂಸದರು ಚುನಾವಣಾ ಆಯೋಗದ ಕಚೇರಿಗೆ ತೆರಳಲು ಯತ್ನಿಸಿದರು. ಆಯೋಗದ ಕಚೇರಿಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಭಾರಿ ಪೊಲೀಸ್ ಪಡೆಯು ಅವರನ್ನು ತಡೆಯಿತು. ಕಾಂಗ್ರೆಸ್ ಜತೆಗೆ ಮುನಿಸಿಕೊಂಡು ‘ಇಂಡಿಯಾ’ ಮೈತ್ರಿಕೂಟದಿಂದ ಹೊರ ನಡೆದಿದ್ದ ಆಮ್ ಆದ್ಮಿ ಪಕ್ಷವೂ ಸೋಮವಾರದ ಪ್ರತಿಭಟನೆಯಲ್ಲಿ ಭಾಗಿಯಾಯಿತು.

ಪ್ರತಿಭಟನೆನಿರತರನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ, ‘ಚುನಾವಣಾ ಆಯೋಗದವರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ, ಎಲ್ಲ ಸಂಸದರನ್ನು ತಡೆದು ವಶಕ್ಕೆ ತೆಗೆದುಕೊಳ್ಳಲಾಯಿತು. ಮತ ಕಳ್ಳತನದ ಸತ್ಯ ಈಗ ದೇಶದ ಮುಂದಿದೆ. ಇದು ರಾಜಕೀಯ ಹೋರಾಟ ಅಲ್ಲ- ಇದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ‘ಒಬ್ಬ ವ್ಯಕ್ತಿ, ಒಂದು ಮತ’ದ ಹಕ್ಕನ್ನು ರಕ್ಷಿಸುವ ಹೋರಾಟ’ ಎಂದು ಸ್ಪಷ್ಟಪಡಿಸಿದರು.

‘ಶುದ್ಧ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧವಾಗಬೇಕು ಎಂದು ವಿರೋಧ ಪಕ್ಷ ಮತ್ತು ದೇಶದ ಪ್ರತಿಯೊಬ್ಬ ಮತದಾರರು ಒತ್ತಾಯಿಸುತ್ತಾರೆ. ನಾವು ಇದನ್ನು ಎಂತಹ ಬೆಲೆ ತೆತ್ತಾದರೂ ಪಡೆದುಕೊಳ್ಳುತ್ತೇವೆ’ ಎಂದರು. ಪ್ರತಿಭಟನೆನಿರತ ಸಂಸದರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮಧ್ಯಾಹ್ನ 2 ಗಂಟೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಖರ್ಗೆ ಮಾತನಾಡಿ, ‘ಈ ಪ್ರತಿಭಟನೆಯು ಜನರ ಮತದಾನದ ಹಕ್ಕನ್ನು ರಕ್ಷಿಸುವ ಹೋರಾಟ’ ಎಂದರು.

ನಿಯೋಗಕ್ಕೆ ಸದಸ್ಯರ ಮಿತಿ: ಭೇಟಿಗೆ ‘ಇಂಡಿಯಾ’ ನಿರಾಕರಣೆ

ಪ್ರತಿಭಟನೆಯ ಬಳಿಕ ಎಲ್ಲ ಸಂಸದರ ಜತೆಗೆ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಲು ‘ಇಂಡಿಯಾ’ ಕೂಟ ಬಯಸಿತ್ತು. ಮೂವತ್ತು ಸಂಸದರು ಇರುವ ನಿಯೋಗವನ್ನಷ್ಟೇ ಭೇಟಿ ಮಾಡುತ್ತೇವೆ ಎಂದು ಆಯೋಗ ಸ್ಪಷ್ಟಪಡಿಸಿತ್ತು. ಸಂಖ್ಯೆಗೆ ಮಿತಿ ಹೇರಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೈತ್ರಿಕೂಟದ ನಾಯಕರು ಚುನಾವಣಾ ಆಯೋಗದ ಪ್ರಮುಖರ ಭೇಟಿಗೆ ನಿರಾಕರಿಸಿದರು.

30 ಸದಸ್ಯರ ನಿಯೋಗ ಬರಲು ವಿಪಕ್ಷ ಕೂಟ ಒಪ್ಪಿಕೊಂಡಿತ್ತು. ಆ ಬಳಿಕ ತನ್ನ ಮಾತಿನಿಂದ ಹಿಂದಕ್ಕೆ ಸರಿಯಿತು ಎಂದು ಆಯೋಗದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಗೆ ಭಾನುವಾರ ಪತ್ರ ಬರೆದು ಶಾಂತಿಯುತ ಮೆರವಣಿಗೆಯ ಬಳಿಕ ಸಂಸದರು ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದರು.

ಬಳಿಕ ಪ್ರತಿಕ್ರಿಯಿಸಿದ್ದ ಆಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಭೇಟಿ ಮಾಡಬಹುದು. ಆದರೆ ಸ್ಥಳಾವಕಾಶದ ಮಿತಿಯಿಂದಾಗಿ 30 ಜನರ ಹೆಸರು ಮತ್ತು ವಾಹನ ಸಂಖ್ಯೆಗಳನ್ನು ಒದಗಿಸುವಂತೆ ರಮೇಶ್ ಅವರನ್ನು ಕೇಳಿತ್ತು.

ನಾನ್ಯಾಕೆ ಸಹಿ ಹಾಕಲಿ: ರಾಹುಲ್

ರಾಹುಲ್ ಗಾಂಧಿ ಅವರು ‘ಮತ ಕಳವು’ ಹೇಳಿಕೆಯ ಪ್ರಮಾಣಪತ್ರಕ್ಕೆ ಸಹಿ ಹಾಕಬೇಕು ಎಂದು ಚುನಾವಣಾ ಆಯೋಗವು ಪುನರುಚ್ಚರಿಸಿದ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ‘ಇದು ವಿಷಯಾಂತರದ ಪ್ರಯತ್ನ. ಚುನಾವಣಾ ಆಯೋಗದ ದತ್ತಾಂಶಕ್ಕೆ ನಾನು ಏಕೆ ಸಹಿ ಹಾಕಲಿ’ ಎಂದು ಪ್ರಶ್ನಿಸಿದ್ದಾರೆ. ‘ನಾನು ಎತ್ತಿರುವ ವಿಷಯ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಸೀಮಿತ ಅಲ್ಲ ಅದು ದೇಶದ ಅನೇಕ ಲೋಕಸಭಾ ಕ್ಷೇತ್ರಗಳಿಗೆ ವಿಸ್ತರಣೆ ಆಗಲಿದೆ’ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತ ಕಳವು ಆಗಿದೆ ಎಂದು ರಾಹುಲ್ ಅವರು ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಹೇಳಿಕೆಯ ಪ್ರಮಾಣಪತ್ರಕ್ಕೆ ಸಹಿ ಹಾಕಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಯೋಗ ಒತ್ತಾಯಿಸಿತ್ತು. ಈ ಸಂಬಂಧ ಕರ್ನಾಟಕ ಹರಿಯಾಣ ಹಾಗೂ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಗಳು ರಾಹುಲ್ಗೆ ಪತ್ರ ಬರೆದಿದ್ದರು.

‘ನೋಟಿಸ್ ನೀಡಲು ಅವರು ಯಾರು?’

ಬೆಂಗಳೂರು: ಮತ ಕಳವು ವಿಚಾರದಲ್ಲಿ ಪಕ್ಷಗಳ ನಾಯಕರಿಗೆ ನೋಟಿಸ್ ನೀಡಲು ಅವರು ಯಾರು? ಪ್ರಜಾಪ್ರಭುತ್ವದಲ್ಲಿ ಜನರ ದನಿಯಾಗಿ ನಾವು ಕೆಲಸ ಮಾಡು ತ್ತೇವೆ. ಮತದ ಹಕ್ಕು ದುರುಪಯೋಗವಾಗಬಾರದು ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷವಾಗಿ ನಾವು ಪ್ರಸ್ತಾಪಿಸಿ ದ್ದೇವೆ. ಇದಕ್ಕೆ ನೋಟಿಸ್ ನೀಡಿದರೆ ಹೇಗೆ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಳಿದರು.

ರಾಹುಲ್ ಗಾಂಧಿ ಅವರಿಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ನೋಟಿಸ್ ನೀಡಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ‘ಯಾರೇ ನೋಟಿಸ್ ನೀಡಿದರೂ ನಾವು ಹೆದರುವುದಿಲ್ಲ. ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳು ವುದನ್ನು ಬಿಟ್ಟು ನಮಗೆ ನೋಟಿಸ್ ನೀಡಿರುವುದನ್ನು ಒಪ್ಪುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.