ಬಿಜೆಪಿ ನೆರಳಿನಲ್ಲಿ ಎಸ್‌ಐಆರ್ ನಡೆಸಲಾಗುತ್ತಿಲ್ಲ ಎಂಬುದನ್ನು ಆಯೋಗವು ತಕ್ಷಣವೇ ಸಾಬೀತು ಮಾಡಬೇಕು. ಮತಗಳ್ಳತನ ಮಾಡಲು ಬಿಜೆಪಿಯು ಈ ಪ್ರಕ್ರಿಯೆಯನ್ನು ಅಸ್ತ್ರವಾಗಿಸಿಕೊಂಡಿದೆ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಚುನಾವಣೆ ಹೊತ್ತಿನಲ್ಲಿ ನಡೆಯುವ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಆಯೋಗದ ಅಧಿಕಾರಿಗಳ ಒತ್ತಡ ತಾಳಲಾರದೆಯೇ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಡಿ.9ಕ್ಕೆ ಕೇರಳದಲ್ಲಿ ಮೊದಲ ಹಂತದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಇದೇ ದಿನವೇ ಅಂತಿಮ ಪಟ್ಟಿಯಯನ್ನು ನೀಡಲು ಆಯೋಗವು ಬಿಎಲ್‌ಒಗಳಿಗೆ ಸೂಚಿಸಿದೆ