ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಮಹಾರಾಷ್ಟ್ರದಲ್ಲಿ ಭಾನುವಾರ ಬೆಳಿಗ್ಗೆಯ ವರೆಗೆಒಟ್ಟು 65,168 ಪ್ರಕರಣಗಳು ಬೆಳಕಿಗೆ ಬಂದಿದ್ದು, 2,197 ಜನರು ಮೃತರಾಗಿದ್ದಾರೆ. 34,890 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 28,081 ಮಂದಿ ಗುಣಮುಖರಾಗಿದ್ದಾರೆ. ದೇಶದಾದ್ಯಂತ ಸೋಂಕಿತರ ಸಂಖ್ಯೆ1,82,143ಕ್ಕೆ ಏರಿಕೆಯಾಗಿದೆ.5,164 ಜನರು ಸಾವಿಗೀಡಾಗಿದ್ದಾರೆ.