ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವೆಚ್ಚ ಏರಿಕೆ ನಿಯಂತ್ರಣಕ್ಕೆ ಆಯೋಗ ಸ್ಥಾಪಿಸಲು ಆಗ್ರಹ: ಮಸೂದೆ ಮಂಡನೆ

Last Updated 9 ಡಿಸೆಂಬರ್ 2022, 16:25 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ವೆಚ್ಚ ಏರಿಕೆಯಾಗುವುದನ್ನು ನಿಯಂತ್ರಿಸಲು ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಬೇಕೆಂದು ಕೋರಿ ಸಿಪಿಐ ಸಂಸದ ಸಂತೋಷ್‌ ಕುಮಾರ್‌ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದಾರೆ.

ಭಾರತದಲ್ಲಿ ಚಿಕಿತ್ಸಾ ವೆಚ್ಚವು ಶೇ7.21ರಷ್ಟು ಹೆಚ್ಚಾಗಿದೆ ಎಂದು ಅವರು ಮಸೂದೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಆಯೋಗವು ವೈದ್ಯಕೀಯ ವೆಚ್ಚ ಹೆಚ್ಚಳದ ಮೇಲೆ ನಿಗದಿತವಾಗಿ ನಿಗಾ ವಹಿಸಬೇಕು ಮತ್ತು ಔಷಧಗಳ ವೆಚ್ಚ, ರೋಗ ಪತ್ತೆಗಾಗಿ ನಡೆಸುವ ಪರೀಕ್ಷೆಗಳ ವೆಚ್ಚಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ವೆಚ್ಚವು ಪ್ರತಿ ವರ್ಷ ಏರಿಕೆಯಾಗುತ್ತಿರುವುದರ ಪರಿಣಾಮ ಮಧ್ಯಮ ವರ್ಗದವರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ ಎಂದು ಸಂತೋಷ್‌ ಕುಮಾರ್‌ ಅವರು ಮಂಡಿಸಿರುವ ಮಸೂದೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT