ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಹಿಳೆಯರು ಇಲ್ಲದೇ ರಾಷ್ಟ್ರ ಮುನ್ನಡೆಯದು’

Last Updated 29 ಸೆಪ್ಟೆಂಬರ್ 2018, 19:47 IST
ಅಕ್ಷರ ಗಾತ್ರ

ಜೈಪುರ: ‘ಮಹಿಳೆಯ ಬೆಂಬಲವಿಲ್ಲದೇ ರಾಷ್ಟ್ರ ಮುನ್ನಡೆಯಲು ಸಾಧ್ಯವಿಲ್ಲ’ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

‘ಮಹಿಳೆಯರನ್ನು ಗುಲಾಮರಂತೆ ಕಾಣಬಾರದು, ದೇವತೆಗಳಂತೆ ನೋಡಬೇಕು. ಈ ನಿಟ್ಟಿನಲ್ಲಿ ಜನರು ತಮ್ಮ ಮನೋಭಾವ ಬದಲಿಸಿಕೊಳ್ಳಬೇಕು. ಪುರುಷರಿಗಿಂತ ಮಹಿಳೆಯರು ಕಡಿಮೇಯೇನಲ್ಲ’ ಎಂದು ಹೇಳಿದ್ದಾರೆ.

ಇಲ್ಲಿನ ಇಂದಿರಾ ಗಾಂಧಿ ಪಂಚಾಯತ್‌ರಾಜ್‌ ಸಂಸ್ಥೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಭದ್ರತೆಗಾಗಿ ಬಲಿಷ್ಠ ಕಾನೂನಿನ ಅಗತ್ಯವಿದೆ ಎಂದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಪ್ರಮುಖ ಕ್ಷೇತ್ರಗಳಲ್ಲೂ ಮಹಿಳೆಯರು ನಾಯಕ ಸ್ಥಾನ ವಹಿಸಿದ್ದಾರೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT