ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 11,502 ಹೊಸ ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, 325 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಈವರೆಗೆ ಒಟ್ಟು 3,32,424 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 9,520 ಜನರು ಸಾವಿಗೀಡಾಗಿದ್ದಾರೆ.
ಸದ್ಯ 1,53,106 ಪ್ರಕರಣಗಳು ಸಕ್ರಿಯವಾಗಿದ್ದು, 1,69,798 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
#CoronaVirusUpdates: #COVID19 India Tracker
— #IndiaFightsCorona (@COVIDNewsByMIB) June 15, 2020
(As on 15 June, 2020, 08:00 AM)
▶️ Confirmed cases: 332,424
▶️ Active cases: 153,106
▶️ Cured/Discharged/Migrated: 169,798
▶️ Deaths: 9,520#IndiaFightsCorona#StayHome #StaySafe @ICMRDELHI
Via @MoHFW_INDIA pic.twitter.com/I6IIOVNjaV
ಕೋವಿಡ್-19ನ ಹೊಡೆತಕ್ಕೆ ತೀವ್ರ ಸಿಲುಕಿರುವ ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 1,07,958 ಪ್ರಕರಣಗಳು ಬೆಳಕಿಗೆ ಬಂದಿದ್ದು, 3,950 ಜನರು ಮೃತರಾಗಿದ್ದಾರೆ. 53,030 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 50,978 ಮಂದಿ ಗುಣಮುಖರಾಗಿದ್ದಾರೆ.
ಗುಜರಾತ್ನಲ್ಲಿ 5,742 ಸಕ್ರಿಯ ಪ್ರಕರಣಗಳಿದ್ದು, 16,325 ಗುಣಮುಖರಾಗಿದ್ದಾರೆ. ಇದುವರೆಗೂ 1,477 ಜನರು ಮೃತಪಟ್ಟಿದ್ದು, ಒಟ್ಟಾರೆ 23,544 ಜನರಿಗೆ ಸೋಂಕು ತಗುಲಿದೆ.
325 deaths and 11,502 new #COVID19 cases reported in the last 24 hours. Total number of cases in the country now at 332424 including 153106 active cases, 169798 cured/discharged/migrated and 9520 deaths: Ministry of Health and Family Welfare pic.twitter.com/9bFgKeqrRG
— ANI (@ANI) June 15, 2020
ದೆಹಲಿಯಲ್ಲಿ 24,032 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ 41,182 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 1,327 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 44,661 ಮಂದಿಗೆ ಸೋಂಕು ತಗುಲಿದ್ದು, 19,679 ಸಕ್ರಿಯ ಪ್ರಕರಣಗಳಿವೆ.ಇದುವರೆಗೂ 435 ಮಂದಿ ಮೃತಪಟ್ಟಿದ್ದು, 24,547 ಗುಣಮುಖರಾಗಿದ್ದಾರೆ.
ಇನ್ನುಳಿದಂತೆ ಮಧ್ಯಪ್ರದೇಶದಲ್ಲಿ 459, ಪಶ್ಚಿಮ ಬಂಗಾಳದಲ್ಲಿ 475, ಉತ್ತರ ಪ್ರದೇಶದಲ್ಲಿ 399 ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.