ಮುಂಬೈ: ವಾಣಿಜ್ಯ ನಗರಿ ಮುಂಬೈ ಹಾಗೂ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆ ವಿತರಣೆಯನ್ನು ಎರಡು ದಿನಗಳ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

'ಕೋವಿನ್' ಆ್ಯಪ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಜನವರಿ 17 ಹಾಗೂ 18ರಂದು ಮುಂಬೈನಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಮಾಹಿತಿ ಒದಗಿಸಿದೆ.

ಕೋವಿಡ್-19 ಲಸಿಕೆ ಪಡೆಯುವ ಮುಂಚೂಣಿಯ ಸೇನಾನಿಗಳ ಹೆಸರುಗಳನ್ನು ಕೋವಿನ್ ಆ್ಯಪ್‌ನಲ್ಲಿ ನೊಂದಾಯಿಸಬೇಕಿದೆ. ಈ ಸಂಬಂಧ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನೀಗ ಕೇಂದ್ರ ಸರ್ಕಾರ ಸರಿಪಡಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಮುಂಬೈನಲ್ಲಿ ಭಾನುವಾರ ಹಾಗೂ ಸೋಮವಾರ ಕೋವಿಡ್-19 ಲಸಿಕೆ ವಿತರಣೆಯು ಸ್ಥಗತಿಗೊಳ್ಳಲಿದ್ದು, ಮಂಗಳವಾರದಂದು ಆರಂಭಗೊಳ್ಳಲಿದೆ.

ಇದನ್ನೂ ಓದಿ:ಕೋವಿಶೀಲ್ಡ್ ಬೇಕು, ಕೋವ್ಯಾಕ್ಸಿನ್ ಬೇಡ: ವೈದ್ಯರ ಮನವಿ

ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ರಾಜೇಶ್ ತೋಪೆ ಸಮಸ್ಯೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕೇಂದ್ರ ಸಚಿವರು ತುರ್ತಾಗಿ ಪರಿಹರಿಸುವ ಭರವಸೆ ನೀಡಿದ್ದಾರೆ.

ಕೋವಿಡ್-19 ಲಸಿಕೆ ಚುಚ್ಚುಮದ್ದು ಪಡೆಯುವ ಎಲ್ಲರೂ ಕೋವಿನ್ ಆ್ಯಪ್‌ನಲ್ಲಿ ನೊಂದಾಯಿಸುವುದು ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.