ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಭಾನುವಾರವೂ ಅನೇಕ ರಾಜ್ಯಗಳಲ್ಲಿ ಸಾವಿರಕ್ಕೂ ಮಿಕ್ಕಿ ಪ್ರಕರಣಗಳು ದೃಢಪಟ್ಟಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 6,555 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 151 ಜನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,06,619 ತಲುಪಿದ್ದು, ಈವರೆಗೆ 8,822 ಜನ ಮೃತಪಟ್ಟಿದ್ದಾರೆ. ಸದ್ಯ 86,040 ಸಕ್ರಿಯ ಪ್ರಕರಣಗಳಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ತಮಿಳುನಾಡಿನಲ್ಲಿ 4,150 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 60 ಸಾವು ಸಂಭವಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 1,11,151ಕ್ಕೆ ಏರಿಕೆಯಾಗಿದೆ. ಈವರೆಗೆ 1,510 ಮಂದಿ ಅಸುನೀಗಿದ್ದಾರೆ. ಸದ್ಯ 46,860 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:Covid-19 Karnataka Update | ಒಂದೇ ದಿನ 1925 ಪ್ರಕರಣ, ಬೆಂಗಳೂರಿನಲ್ಲಿ 1235

ದೆಹಲಿಯಲ್ಲಿ 2,244 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 63 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 99,444 ತಲುಪಿದ್ದು, ಸಾವಿನ ಸಂಖ್ಯೆ 3,067 ತಲುಪಿದೆ. ಪ್ರಸ್ತುತ 25,038 ಪ್ರಕರಣಗಳಿವೆ.

ಉತ್ತರ ಪ್ರದೇಶದಲ್ಲಿ 1,155 ಹೊಸ ಪ್ರಕರಣ, 12 ಸಾವು ಸಂಭವಿಸಿದೆ. ಕೇರಳದಲ್ಲಿ 225, ಪಂಜಾಬ್‌ನಲ್ಲಿ 175, ಉತ್ತರಾಖಂಡದಲ್ಲಿ 31, ಪಶ್ಚಿಮ ಬಂಗಾಳದಲ್ಲಿ 895, ಜಮ್ಮು–ಕಾಶ್ಮೀರದಲ್ಲಿ 183, ಗುಜರಾತ್‌ನಲ್ಲಿ 725 ಪ್ರಕರಣಗಳು ದೃಢಪಟ್ಟಿವೆ.

ಫ್ಯಾಕ್ಟ್ಚೆಕ್:ನರೇಂದ್ರ ಮೋದಿ ಭೇಟಿ ನೀಡಿದ್ದು ಸೇನಾ ಆಸ್ಪತ್ರೆಗೆ, ಅದು ಫೋಟೊಶಾಪ್ ವಾರ್ಡ್ ಅಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.