ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ| ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾವೈರಸ್ ಸೋಂಕಿತ ಮಹಿಳೆ

Last Updated 14 ಮೇ 2020, 10:19 IST
ಅಕ್ಷರ ಗಾತ್ರ

ಭುವನೇಶ್ವರ್: ಗುಜರಾತ್‌ನಿಂದ ಒಡಿಶಾದ ಗಂಜಾಮ್ ಜಿಲ್ಲೆಗೆ ವಾಪಸ್ ಆಗಿದ್ದ ಕೊರೊನಾವೈರಸ್ ಸೋಂಕಿತ ಮಹಿಳೆ ಬುಧವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆಗೆ ಅವಧಿಪೂರ್ವ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಹುಟ್ಟಿದೆ. ಆರೋಗ್ಯವಿಲ್ಲದೆ ಗಂಡು ಮಗು ತೀರಿದ್ದು, ಹೆಣ್ಣು ಮಗು ಮತ್ತು ಬಾಣಂತಿ ಆರೋಗ್ಯವಾಗಿದ್ದಾರೆ ಎಂದು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎಸ್.ಕೆ.ಮಿಶ್ರಾ ಹೇಳಿದ್ದಾರೆ.

ಬಾಣಂತಿ ಮತ್ತು ಮಗುವಿಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಮಿಶ್ರಾ ಹೇಳಿದ್ದಾರೆ. ಆಕೆಗೆ ಕೊರೊನಾವೈರಸ್ ಸೋಂಕು ಇರುವುದರಿಂದ ಸೀತಾಲಪಲ್ಲಿಯಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು. ಆಕೆಯ ಮಗುವಿಗೂ ಪ್ರತ್ಯೇಕ ಆರೈಕೆ ನೀಡಲಾಗಿದೆ.ಒಂದು ವಾರದ ನಂತರ ಮಗುವಿಗೆ ಕೊರೊನಾವೈರಸ್ ತಪಾಸಣೆ ನಡೆಸಲಾಗುವುದು ಎಂದಿದ್ದಾರೆ ಮಿಶ್ರಾ.

ಮೇ.9ರಂದು ಗರ್ಭಿಣಿಯನ್ನು ಎಂಕೆಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಹಿಳೆಸೂರತ್‌ನಿಂದ ಗಂಡನ ಜತೆ ಒಡಿಶಾಕ್ಕೆ ಮರಳಿದ್ದಳು. ಕೊರೊನಾಸೋಂಕು ಇರುವುದಾಗಿ ಪತ್ತೆಯಾದ ಕೂಡಲೇ ಮೇ.10ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಬುಧವಾರ ಬೆಳಗ್ಗೆ ಮತ್ತು ಎಂಕೆಸಿಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT