ನವದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರ ಹೋಗುವ ವಿಮಾನಗಳ ಸಂಖ್ಯೆಯನ್ನು ದೆಹಲಿ ವಿಮಾನ ನಿಲ್ದಾಣದ ನಿರ್ವಾಹಕರು ಮುಂದಿನ ಎಂಟು ದಿನಗಳವರೆಗೆ ಕಡಿತಗೊಳಿಸಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ನಿತ್ಯ 1,300 ವಿಮಾನಗಳನ್ನು ನಿರ್ವಹಿಸುತ್ತಿದ್ದು, ಅತ್ಯಂತ ಜನನಿಬಿಡ ಏರ್ಪೋರ್ಟ್ ಆಗಿದೆ. ಜ. 19ರಿಂದ ಜ. 26ರವರೆಗೂ ಬೆಳಿಗ್ಗೆ 10.20ರಿಂದ ಮಧ್ಯಾಹ್ನ 12.45ರವರೆಗೆ ಈ ನಿರ್ಬಂಧ ಮುಂದುವರಿಯಲಿದೆ. ಈ ಅವಧಿಯಲ್ಲಿ ಯಾವುದೇ ವಿಮಾನಗಳು ಹಾರಾಟ ನಡೆಸುವಂತಿಲ್ಲ ಎಂದು ಏರ್ಮೆನ್ಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಈ ವಿಷಯವನ್ನು ಹೇಳಲಾಗಿದೆ.

ಈ ದಿನಗಳಲ್ಲಿ ವಿಮಾನ ಮೂಲಕ ಪ್ರಯಾಣಿಸಲು ಯೋಜನೆ ರೂಪಿಸಿರುವವರು ತಾವು ಟಿಕೆಟ್ ಕಾಯ್ದಿರಿಸಿರುವ ಸಂಸ್ಥೆಗಳನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ. ಈ ನಿರ್ಬಂಧ ಕುರಿತು ವಿಮಾನಯಾನ ಸಂಸ್ಥೆಗಳು ಸದ್ಯಕ್ಕೆ ಪ್ರತಿಕ್ರಿಯಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.