ಅಮರಾವತಿ/ಭುವನೇಶ್ವರ/ಹೈದರಾಬಾದ್: ‘ಮೊಂಥಾ ಚಂಡಮಾರುತವು ತನ್ನ ತೀವ್ರತೆಯನ್ನು ತಗ್ಗಿಸಿಕೊಂಡಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ. ಚಂಡಮಾರುತದ ಪರಿಣಾಮವು ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ತೀವ್ರವಾಗಿ ತಟ್ಟಿದೆ. ಒಡಿಶಾದಲ್ಲಿ ಭೂಕುಸಿತ ಸಂಭವಿಸಿದೆ, ಜಾರ್ಖಂಡ್ನಲ್ಲಿ ಮಳೆಯಾಗಿದೆ.

‘ಮೊಂಥಾ’ ಕಾರಣದಿಂದಾಗಿ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. ತೀವ್ರ ಮಳೆಗೆ ಒಳಗಾದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ನಾಯ್ಡು ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಹೈದರಾಬಾದ್ ಮತ್ತು ತೆಲಂಗಾಣದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.

ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ವರೆಗೆ ಭಾರಿ ಮಳೆಯಾಗಿದೆ. ವೇಗದ ಗಾಳಿ ಬೀಸಿದ್ದರಿಂದ ಸಾವಿರಾರು ಮರಗಳು ಧರೆಗುರುಳಿವೆ. ನೂರಾರು ವಿದ್ಯುತ್ ಕಂಬಗಳು ಬಿದ್ದಿವೆ. ಪೂರ್ವ ಗೋದಾವರಿ ಸೇರಿ ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಸ್ತೆಗಳ ಮೇಲೆ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.

‘ಒಡಿಶಾದಲ್ಲಿ ‘ಮೊಂಥಾ’ದ ಪರಿಣಾಮವು ಹೆಚ್ಚೇನು ಆಗಿಲ್ಲ’ ಎಂದು ಮುಖ್ಯಮಂತ್ರಿ ಮೋಹನ್ ಚರನ್ ಮಾಂಝಿ ಹೇಳಿದರು.

ಬೆಳೆ ಹಾನಿ

* ಆಂಧ್ರದ ಭತ್ತ ಹತ್ತಿ ಜೋಳ ಮತ್ತು ಹೆಸರುಕಾಳು ಬೆಳೆಗಳಿಗೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಸುಮಾರು 4.4 ಲಕ್ಷ ಎಕರೆ ವಿಸ್ತೀರ್ಣದ ಬೆಳೆಗಳು ನಾಶವಾಗಿವೆ. ವೇಗದ ಗಾಳಿಗೆ ಕೊನಸೀಮಾ ಜಿಲ್ಲೆಯಲ್ಲಿನ ಭತ್ತ ಮತ್ತು ಬಾಳೆಮರಗಳು ನೆಲಸಮವಾಗಿವೆ

* ಮಳೆಯ ಕಾರಣ ಭತ್ತ ಮತ್ತು ಹತ್ತಿ ಬೆಳೆಗಳಿಗೆ ಆಗುವ ಹಾನಿಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು ಜನ ಜೀವನ ಅಸ್ತವ್ಯಸ್ತ

* ತೆಲಂಗಾಣದ ನಲ್ಗೊಂಡದಲ್ಲಿ ಸರ್ಕಾರಿ ಗುರುಕುಲ ಶಾಲೆಗೆ ನೀರು ನುಗ್ಗಿದ್ದರಿಂದ 500 ವಿದ್ಯಾರ್ಥಿಗಳು ಮತ್ತು 26 ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದ ಸಿಬ್ಬಂದಿ ಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ತೀವ್ರ ಮಳೆಯಾದ ಜಿಲ್ಲೆಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು

* ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಹಾವು ಕಡಿತದ ಎಂಟು ಪ್ರಕರಣ ದಾಖಲಾಗಿದೆ 50 ಕೆ.ಜಿ ಅಕ್ಕಿ ವಿತರಣೆ ಮೀನುಗಾರರು ಮತ್ತು ನೇಕಾರರಿಗೆ ಬುಧವಾರದಿಂದ ₹50 ಕೆ.ಜಿ ಅಕ್ಕಿ 1 ಕೆ.ಜಿ ಬೆಳೆ 1 ಲೀಟರ್ ಅಡುಗೆ ಎಣ್ಣೆ 1 ಕೆ.ಜಿ. ಈರುಳ್ಳಿ 1 ಕೆ.ಜಿ. ಆಲೂಗೆಡ್ಡೆ ಮತ್ತು 1 ಕೆ.ಜಿ. ಸಕ್ಕರೆ ನೀಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.