ಬಲಿಯಾ: ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಕ್ಷೇಪಾರ್ಹ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಅನಾಮದೇಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭೋಜಪುರಿ ಹಾಡಿಗೆ ಮಹಾತ್ಮಾ ಗಾಂಧಿ, ನರೇಂದ್ರ ಮೋದಿ ಹಾಗೂ ಯೋಗಿ ಅಧಿತ್ಯನಾಥ ಅವರು ನರ್ತಿಸುವಂತೆ ಎಡಿಟ್ ಮಾಡಿರುವ ವಿಡಿಯೊದೊಂದಿಗೆ ಪೊಲೀಸರನ್ನು ಪ್ರಶ್ನಿಸಿರುವ ಸಾಮಾಜಿಕ ಕಾರ್ಯಕರ್ತೆ ನೇಹಾ ಸಿಂಗ್ ರಾಥೋಡ್ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಯಾವಾಗ ಎಂದು ಪ್ರಶ್ನಿಸಿದ್ದಾರೆ.
‘ರಾಜ್ಯದಲ್ಲಿ ಮಹಿಳೆಯರ ಭದ್ರತೆ, ಆತ್ಮಗೌರವ ಹಾಗೂ ಸಬಲೀಕರಣಕ್ಕಾಗಿ ಯೋಗಿ ಆದಿತ್ಯನಾಥ ಅವರು ಸಾಕಷ್ಟು ದುಡಿದಿದ್ದಾರೆ. ಆದರೆ ಅತ್ಯಂತ ಕಳಪೆಮಟ್ಟದ ರೀಲ್ ಮೂಲಕ ಯೋಗಿ ಅವರನ್ನು ಅವಮಾನಿಸಲಾಗಿದೆ. ಅಗ್ಗದ ಜನಪ್ರಿಯತೆಗಾಗಿ ಮಹಾತ್ಮಾ ಗಾಂಧಿ ಹಾಗೂ ನರೇಂದ್ರ ಮೋದಿ ಅವರ ಚಿತ್ರ ಬಳಸಿ, ವಿಡಿಯೊ ಎಡಿಟ್ ಮಾಡಿ ಅಪ್‌ಲೋಡ್ ಮಾಡಲಾಗಿದೆ’ ಎಂದಿದ್ದಾರೆ.
उत्तर प्रदेश के लोकप्रिय यशस्वी मुख्यमंत्री योगी आदित्यनाथ जी महाराज अपने राज्य की बेटियों एवं बहनों की मान सम्मान, नारी सशक्तिकरण और सुरक्षा के लिए बहुतेरे प्रयास किए और प्रयासरत भी हैं,
— Neha Singh Rathore || नेहा सिंह राठौड़ (@imrowdy_rathore) September 24, 2024
लेकिन, कुछ चिंदी चोर सड़क छाप रिलर चंद व्यूज के लिए योगी जी का किस कदर इस्तेमाल कर रहे है… pic.twitter.com/HgAI1dzVwB
ಪ್ರವೀಣ್ ಸಿಂಗ್ ಎಂಬುವವರು ನೀಡಿದ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅನಾಮದೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಜಾ ತಿಳಿಸಿದ್ದಾರೆ.
ಭೋಜಪುರಿ ಹಾಡಿಗೆ ಮಹಾತ್ಮಾ ಗಾಂಧಿ, ನರೇಂದ್ರ ಮೋದಿ ಹಾಗೂ ಯೋಗಿ ಅಧಿತ್ಯನಾಥ ಅವರು ನರ್ತಿಸುವಂತೆ ಮಾಡಿರುವ ವಿಡಿಯೊವನ್ನು ರಾಥೋಡ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಯಾವಾಗ ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.