ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ವೊಲ್ಖೋವ್ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಭಾರತೀಯರ ಮೃತದೇಹ ಪತ್ತೆ

Published 8 ಜೂನ್ 2024, 23:58 IST
Last Updated 8 ಜೂನ್ 2024, 23:58 IST
ಅಕ್ಷರ ಗಾತ್ರ

ಜಲಗಾಂವ್: ರಷ್ಯಾದ ವೊಲ್ಖೋವ್ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ದೇಶಕ್ಕೆ ತರಲಾಗುತ್ತಿದೆ ಎಂದು ಮಹಾರಾಷ್ಟ್ರದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

‘ದುರ್ಘಟನೆ ನಡೆದ ಎರಡು ದಿನಗಳಲ್ಲಿಯೇ ಎರಡು ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. ಉಳಿದ ಇಬ್ಬರ ಮೃತದೇಹಗಳನ್ನು ಶನಿವಾರ ಬೆಳಗ್ಗೆ ಹೊರತೆಗೆಯಲಾಯಿತು’ ಎಂದು ಜಲಗಾಂವ್ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ತಿಳಿಸಿದ್ದಾರೆ. ಎಲ್ಲರೂ 18–20ರ ವಯಸ್ಸಿನವರು ಎಂದು ತಿಳಿಸಿದ್ದಾರೆ.

‘ಎಲ್ಲ ನಾಲ್ವರೂ ಮಹಾರಾಷ್ಟ್ರ ಮೂಲದವರಾಗಿದ್ದು, ಮೊದಲು ಅವರ ಮೃತದೇಹಗಳನ್ನು ಮುಂಬೈಗೆ ತರಲಾಗುವುದು. ನಂತರ ಸ್ವಂತ ಊರುಗಳಿಗೆ ಸಾಗಿಸಲಾಗುವುದು’ ಎಂದು ಹೇಳಿದರು.

ಎಲ್ಲರೂ ನೊವೊಗೊರೊಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT