ನವದೆಹಲಿ: ಬರೋಬ್ಬರಿ 50 ದಿನಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ವಾತಾವರಣ ಸುಧಾರಿಸಿದೆ. ಬುಧವಾರ ಸಂಜೆ 4 ಗಂಟೆಯ ಹೊತ್ತಿಗೆ ಗಾಳಿಯ ಸೂಚ್ಯಂಕ (ಎಕ್ಯೂಐ) 178ಕ್ಕೆ ತಲುಪಿದೆ.

ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಬುಧವಾರ ನಗರದಲ್ಲಿ ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಡಿ.7ರವರೆಗೂ ಇದೇ ರೀತಿಯವ ವಾತಾವರಣ ಇರಲಿದೆ ಎಂದು ಹೇಳಿದೆ.

ಹಗಲಿನಲ್ಲಿ ಶುದ್ಧಗಾಳಿಯೊಂದಿಗೆ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಆದ್ರತೆ ಪ್ರಮಾಣ ಶೇ 66 ಮತ್ತು ಶೇ 44ರ ನಡುವೆ ಬದಲಾವಣೆಯಾಗುತ್ತಿದೆ.

ಗುರುವಾರ ಮೋಡ ಮುಸುಕಿದ ವಾತಾವರಣ ಇರಲಿದ್ದು ಗರಿಷ್ಠ 26 ಮತ್ತು ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಇಲಾಖೆ ಮಾಹಿತಿ ನೀಡಿದೆ.
.Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ.ದೆಹಲಿ | ವಾಯು ಮಾಲಿನ್ಯ ತಗ್ಗಿಸಲು ಟ್ರಕ್–ಮೌಂಟ್ ವಾಟರ್ ಸ್ಪ್ರಿಂಕ್ಲರ್ ಬಳಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.