ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ | ವಿದ್ಯಾರ್ಥಿಯ ಖಾಸಗಿ ಅಂಗಕ್ಕೆ ದೊಣ್ಣೆ ಸಿಕ್ಕಿಸಿ ಹಲ್ಲೆ: ಸಹಪಾಠಿಯ ಬಂಧನ

Published 7 ಏಪ್ರಿಲ್ 2024, 2:39 IST
Last Updated 7 ಏಪ್ರಿಲ್ 2024, 2:39 IST
ಅಕ್ಷರ ಗಾತ್ರ

ನವದೆಹಲಿ: 14 ವರ್ಷದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಸಹಪಾಠಿಯೊಬ್ಬ, ಖಾಸಗಿ ಅಂಗಕ್ಕೆ ದೊಣ್ಣೆ ಸಿಕ್ಕಿಸಿ ಕಿರುಕುಳ ನೀಡಿರುವ ಘಟನೆ ದೆಹಲಿಯ ಖಾಸಗಿ ಶಾಲೆಯಲ್ಲಿ ವರದಿಯಾಗಿದೆ. ಸಂತ್ರಸ್ತ ವಿದ್ಯಾರ್ಥಿಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ, ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ ಎಂದಿರುವ ಪೊಲೀಸರು, ಸಂತ್ರಸ್ತ ವಿದ್ಯಾರ್ಥಿಯ ಪೋಷಕರು ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಶಂಕಿಸಿರುವುದಾಗಿಯೂ ಹೇಳಿದ್ದಾರೆ.

'ಖಾಸಗಿ ಶಾಲೆಯ ಆವರಣದಲ್ಲಿ ಏಪ್ರಿಲ್‌ 2ರಂದು ಈ ಘಟನೆ ನಡೆದಿದೆ. 8ನೇ ತರಗತಿ ಓದುತ್ತಿರುವ ಸಂತ್ರಸ್ತ ವಿದ್ಯಾರ್ಥಿಗೂ, ಆರೋಪಿಗೂ ಜಗಳವಾಗಿ, ಕೃತ್ಯ ನಡೆದಿದೆ' ಎಂದು ದೆಹಲಿ ಪೂರ್ವ ವಿಭಾಗದ ಡಿಸಿಪಿ ಅಪೂರ್ವ ಅವರು ಮಾಹಿತಿ ನೀಡಿದ್ದಾರೆ.

'ಸಹಪಾಠಿಗಳಲ್ಲಿ ಒಬ್ಬನಾದ ಆರೋಪಿಯು ಮಾಸ್ಕ್‌ ಧರಿಸಿದ್ದ. ತನಗೆ ಥಳಿಸಿ, ದೊಣ್ಣೆಯನ್ನು ತನ್ನ ಖಾಸಗಿ ಅಂಗಕ್ಕೆ ಸಿಕ್ಕಿಸಿದ. ಹಲ್ಲೆ ಬಗ್ಗೆ ಯಾರಿಗಾದರು ತಿಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾಗಿ ಸಂತ್ರಸ್ತ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ' ಎಂದೂ ಅವರು ವಿವರಿಸಿದ್ದಾರೆ.

ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆ, ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು, ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಶಾಲೆಯ ಹೊರಗೆ ಏಪ್ರಿಲ್‌ 3ರಂದು ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೊಕ್ಸೊ) ಕಾಯ್ದೆ ಸೇರಿದಂತೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಕೃತ್ಯದಿಂದಾಗಿ ಬಾಲಕನ ಗುದದ್ವಾರದ ಒಳಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT