ನವದೆಹಲಿ: ಐಎಸ್ಐ ಜತೆ ನಂಟು ಹೊಂದಿದ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು, ಈ ಗ್ಯಾಂಗ್ನ ನಾಲ್ವರು ಪ್ರಮುಖ ಸದಸ್ಯರನ್ನು ಶನಿವಾರ ಬಂಧಿಸಿದ್ದಾರೆ.

ಇವರು ಉತ್ತರ ಭಾರತದಾದ್ಯಂತ ಸಂಘಟಿತ ಅಪರಾಧಗಳಿಗೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪಂಜಾಬ್ನ ಮಂದೀಪ್ ಸಿಂಗ್ (38), ದಲ್ವಿಂದರ್ ಕುಮಾರ್ (34), ಉತ್ತರ ಪ್ರದೇಶದ ಬಾಗ್ಪತ್ ನಿವಾಸಿಗಳಾದ ರೋಹನ್ ತೋಮರ್ (30) ಮತ್ತು ಅಜಯ್ ಅಲಿಯಾಸ್ ಮೋನು (37) ಎಂದು ಗುರುತಿಸಲಾಗಿದೆ.

ಈ ಜಾಲವು ಡ್ರೋನ್ಗಳನ್ನು ಬಳಸಿ ಪಾಕಿಸ್ತಾನದಿಂದ ಕಳ್ಳಸಾಗಣೆ ಮಾಡಿದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ದೆಹಲಿ , ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್ನ ದರೋಡೆಕೋರರಿಗೆ ಪೂರೈಸುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡ್ರೋನ್ಗಳನ್ನು ಬಳಸಿಕೊಂಡು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ಬಹಿರಂಗವಾಗಿದೆ. ಕಾರ್ಯಾಚರಣೆ ವೇಳೆ ಟರ್ಕಿ ನಿರ್ಮಿತ ಪಿಎಕ್ಸ್ -5.7 ಮಾದರಿಗಳು ಸೇರಿದಂತೆ 10 ಅತ್ಯಾಧುನಿಕ ಪಿಸ್ತೂಲ್ಗಳು ಮತ್ತು 92 ಸಜೀವ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.