ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ನಡ್ಡಾ ಪತ್ನಿಯ ಕಳುವಾಗಿದ್ದ SUV ಪತ್ತೆ: ಇಬ್ಬರ ಬಂಧನ

Published 7 ಏಪ್ರಿಲ್ 2024, 6:31 IST
Last Updated 7 ಏಪ್ರಿಲ್ 2024, 6:31 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಯ ಕಳುವಾಗಿದ್ದ ಕಾರನ್ನು ಪತ್ತೆ ಮಾಡಿರುವ ದೆಹಲಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ಮಾರ್ಚ್ 19ರಂದು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ನಡ್ಡಾ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚೂನರ್ ಕಾರು ಕಳುವಾಗಿತ್ತು.

ಕಳುವಾಗಿದ್ದ ಕಾರನ್ನು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪತ್ತೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಕಾರನ್ನು ಸರ್ವಿಸ್ ಮಾಡಿಸಿ, ಸಮೀಪದಲ್ಲಿ ನಿಲ್ಲಿಸಿ ಕಾರು ಚಾಲಕ ಊಟಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಕಾರನ್ನು ಕದ್ದು ಪರಾರಿಯಾಗಿದ್ದರು.

ಬಳಿಕ, ಚಾಲಕ ಪೊಲೀಸರಿಗೆ ದೂರು ನೀಡಿದ್ದ. ದೂರನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಹಿಮಾಚಲ ಪ್ರದೇಶದ ನಂಬರ್ ಪ್ಲೇಟ್ ಇದ್ದ ಕಾರು ಕೊನೆಯ ಬಾರಿಗೆ ಗುರುಗ್ರಾಮದ ಕಡೆ ಹೋಗಿದ್ದನ್ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆ ಹಚ್ಚಿದ್ದರು.

‘ಪ್ರಕರಣ ಸಂಬಂಧ ನಾವು ಇಬ್ಬರನ್ನು ಬಂಧಿಸಿದ್ದೇವೆ. ಈ ಕಾರನ್ನು ನಾಗಾಲ್ಯಾಂಡ್‌ಗೆ ಕೊಂಡೊಯ್ದು ಮಾರುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ಎಂದು ಪೊಲೀಸರು ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT