ನವದೆಹಲಿ: ವಿಮಾನ ಟಿಕೆಟ್ ಮುಂಗಡ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಟಿಕೆಟ್ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕದಲ್ಲಿ ಬದಲಾವಣೆ ಮಾಡಿದರೆ ವಿಮಾನಯಾನ ಸಂಸ್ಥೆಗಳು ಅದಕ್ಕೆ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದಂತೆ ನಿಯಮವನ್ನು ಶೀಘ್ರದಲ್ಲಿ ಜಾರಿಗೆ ತರಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ.

ಇದಕ್ಕಾಗಿ ಹೊಸ ನಿಯಮಗಳ ಕರಡನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ.

ಟ್ರಾವೆಲ್ ಏಜೆಂಟ್ ಅಥವಾ ಯಾವುದೇ ಟಿಕೆಟ್ ಪೋರ್ಟಲ್ ಮೂಲಕ ಟಿಕೆಟ್ ಕಾಯ್ದಿರಿಸಿದರೆ ತಾವೇ ನೇಮಿಸಿಕೊಂಡ ಏಜೆಂಟರಾಗಿರುವುದರಿಂದ ಅದರ ಮರುಪಾವತಿಯ ಜವಾಬ್ದಾರಿ ಆಯಾ ವಿಮಾನಯಾನ ಸಂಸ್ಥೆಗಳ ಮೇಲಿರುತ್ತದೆ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.

‘ಮರುಪಾವತಿಯು 21 ಕೆಲಸದ ದಿನಗಳಲ್ಲಿ ಮರುಪಾವತಿಯಾಗಿರುವುದನ್ನು ಆಯಾ ಸಂಸ್ಥೆಗಳು ಖಚಿತಪಡಿಸಬೇಕು. ಇದರ ಜತೆಗೆ, ಪ್ರಯಾಣಿಕರ ಹೆಸರು ನಮೂದಿಸುವಾಗ ತಪ್ಪಾಗಿದ್ದರೆ ಪ್ರಯಾಣಕ್ಕೂ 24 ಗಂಟೆಗಳ ಮೊದಲು ಅದನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಸಂಸ್ಥೆಗಳು ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ. ಆದರೆ ಇದು ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ಅಂತರ್ಜಾಲ ತಾಣದಿಂದ ಕಾಯ್ದಿರಿಸಿದರೆ ಮಾತ್ರ ಲಭ್ಯ’ ಎಂದು ಕರಡಿನಲ್ಲಿ ಹೇಳಲಾಗಿದೆ.

ಟಿಕೆಟ್ ಕಾಯ್ದಿರಿಸಿದ 48 ಗಂಟೆಗಳವರೆಗೂ ಪ್ರಯಾಣಿಕರಿಗೆ ‘ಲುಕ್ ಇನ್ ಆಪ್ಶನ್’ ಸೌಲಭ್ಯವನ್ನು ವಿಮಾನಯಾನ ಸಂಸ್ಥೆಗಳು ನೀಡಬೇಕು. ಈ ಅವಧಿಯಲ್ಲಿ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಪಡಿಸುವ ಅಥವಾ ಬದಲಾವಣೆ ಮಾಡುವ ಅವಕಾಶವನ್ನು ನೀಡಲಾಗಿದ್ದು, ಇದಕ್ಕೆ ಶುಲ್ಕ ಇರುವುದಿಲ್ಲ. ಆದರೆ ಇದು ಪರಿಷ್ಕೃತ ವಿಮಾನದಲ್ಲಿನ ಸಾಮಾನ್ಯ ಟಿಕೆಟ್ ದರಕ್ಕೆ ಹೊಂದಿಕೆಯಾಗಬೇಕಷ್ಟೇ’ ಎಂದೆನ್ನಲಾಗಿದೆ.

‘ಈ ಬದಲಾವಣೆ ಸೌಲಭ್ಯವು ಟಿಕೆಟ್ ಪ್ರಯಾಣ ದಿನಕ್ಕಿಂತ 5 ದಿನಗಳ ಒಳಗಾಗಿ ದೇಶದೊಳಗಿನ ಮಾರ್ಗದಲ್ಲಿ ಹಾಗೂ ಅಂತರರಾಷ್ಟ್ರೀಯ ಮಾರ್ಗದಲ್ಲಿ 15 ದಿನಗಳ ಒಳಗಾಗಿದ್ದಲ್ಲಿ ಸಿಗದು’ ಎಂದು ಡಿಜಿಸಿಎ ಹೇಳಿದೆ.

‘ಮುಂಗಡ ಟಿಕೆಟ್ ಕಾಯ್ದರಿಸಿದ 48 ಗಂಟೆಗಳ ಬಳಿಕ ಬದಲಾವಣೆ ಅಥವಾ ರದ್ದು ಬಯಸಿದಲ್ಲಿ ಈ ಸೌಲಭ್ಯ ಸಿಗದು. ಆಗ ಪ್ರಯಾಣಿಕರು ನಿಗದಿತ ಶುಲ್ಕವನ್ನು ಪಾವತಿಸಬೇಕು. ಒಂದೊಮ್ಮೆ ವೈದ್ಯಕೀಯ ಕಾರಣಗಳಿಗಾಗಿ ಪ್ರಯಾಣಿಕರು ಟಿಕೆಟ್ ರದ್ದುಪಡಿಸಿದರೆ ಆ ಟಿಕೆಟ್ನ ಹಣ ಮರುಪಾವತಿ ಅಥವಾ ಅದಕ್ಕೆ ಕ್ರೆಡಿಟ್ ಶೆಲ್ ನೀಡುವ ಪ್ರಸ್ತಾವವನ್ನೂ ನೀಡಲಾಗಿದೆ’ ಎಂದು ವರದಿಯಾಗಿದೆ.

ಈ ಬದಲಾವಣೆಗೆ ನ. 30ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಡಿಜಿಸಿಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.