ಮುಂಬೈ: ಡಿಜಿಟಲ್ ಪಾವತಿಗಳಿಗೆ ಒಟಿಪಿ ಮಾತ್ರವಲ್ಲದೇ ಎರಡು ಹಂತದ ದೃಢೀಕರಣ (2ಎಫ್ಎ) ಅನುಸರಿಸಲು ಅನುಮತಿಸುವ ನೂತನ ನಿಯಮಗಳು 2026ರ ಏಪ್ರಿಲ್ 1ರಿಂದ ಜಾರಿಯಾಗಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗುರುವಾರ ಘೋಷಿಸಿದೆ.

ಈ ಎರಡು ಹಂತದ ದೃಢೀಕರಣವು, ಬಳಕೆದಾರರಿಗೆ ಸಂಬಂಧಿಸಿದ ವಿಷಯ–ವಸ್ತುಗಳ ಬಗ್ಗೆಯೂ ಇರಬಹುದು ಅಥವಾ ಪಾಸ್ವರ್ಡ್, ಬೆರಳಚ್ಚು ಸೇರಿದಂತೆ ಆಧಾರ್ಕಾರ್ಡ್ ಆಧರಿತ ಇತರೆ ಬಯೋಮೆಟ್ರಿಕ್ ಮಾಹಿತಿಗೆ ಸಂಬಂಧಿಸಿದಂತೆಯೂ ಇರಬಹುದಾಗಿದೆ ಎಂದು ಆರ್ಬಿಐ ಹೇಳಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಳ್ಳುವುದರ ಜತೆಗೆ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ಹಂತದ ದೃಢೀಕರಣದ ಕ್ರಮವನ್ನು ಪರಿಚಯಿಸಲು ಆರ್ಬಿಐ ನಿರ್ಧರಿಸಿದೆ. ಎಸ್ಎಂಎಸ್–ಒಟಿಪಿ ಜತೆಗೆ 2ಎಫ್ಎ ಕಡ್ಡಾಯವಾಗಿ ಇರಲಿದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.