ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುವಾಹಟಿ: ₹84 ಲಕ್ಷ ಮೌಲ್ಯದ ಮಾದಕವಸ್ತು ವಶ

Published 12 ಮೇ 2024, 14:16 IST
Last Updated 12 ಮೇ 2024, 14:16 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ₹84 ಲಕ್ಷ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾನಾಪಾರದಲ್ಲಿ ಮಾದಕವಸ್ತುವನ್ನು ಸಾಗಣೆ ಮಾಡಲಾಗುತ್ತಿರುವ ಕುರಿತು ಖಚಿತ ಮಾಹಿತಿ ಹೊರಕುತ್ತಿದ್ದಂತೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ಕಾರ್ಯಾಚರಣೆಗೆ ಇಳಿಯಿತು. ನಾಲ್ವರು ಮಾದಕವಸ್ತು ಕಳ್ಳಸಾಗಣೆಗಾರರ ಚಲನವಲನವನ್ನು ಪತ್ತೆ ಮಾಡಿದ ತಂಡವು ಅವರನ್ನು ಬಂಧಿಸಿತು. ಅವರಿಂದ, 77 ಶೀಶೆಗಳಲ್ಲಿ ಇರಿಸಲಾಗಿದ್ದ 105 ಗ್ರಾಂ ಹೆರಾಯಿನ್‌, ಎರಡು ಮೊಬೈಲ್‌ ಫೋನ್‌ಗಳು ಮತ್ತು ₹7,220 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದರು.

ಮಾದಕವಸ್ತು ನಿಗ್ರಹ ಸಂಸ್ಥೆ (ಎನ್‌ಸಿಬಿ) ಮಾನದಂಡದ ಪ್ರಕಾರ ವಶಕ್ಕೆ ತೆಗೆದುಕೊಳ್ಳಲಾದ ಮಾದಕವಸ್ತು ಬೆಲೆ ಸುಮಾರು ₹84 ಕೋಟಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT