ನವದೆಹಲಿ: ಒಂದೇ ಸಂಖ್ಯೆಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ಸಮಸ್ಯೆಯನ್ನು ಚುನಾವಣಾ ಆಯೋಗ ಪರಿಹರಿಸಿದೆ. ಅಂತಹ ಕಾರ್ಡ್ಗಳನ್ನು ಹೊಂದಿರುವ ಮತದಾರರಿಗೆ ಹೊಸ ಸಂಖ್ಯೆಗಳೊಂದಿಗೆ ಬೇರೊಂದು ಗುರುತಿನ ಚೀಟಿ ನೀಡಲಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಒಂದೇ ರೀತಿಯ ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ಸಂಖ್ಯೆಯಿರುವ ಮತದಾರರ ಗುರುತಿನ ಚೀಟಿಗಳು ಅತಿ ಕಡಿಮೆ ಸಂಖ್ಯೆಯಲ್ಲಿವೆ. ಸರಾಸರಿ, ನಾಲ್ಕು ಮತಗಟ್ಟೆಗಳಲ್ಲಿ ಒಂದು ಇರಬಹುದು ಎಂದು ಹೇಳಿದರು.

ತಳಮಟ್ಟದಲ್ಲಿ ನಡೆದ ಪರಿಶೀಲನೆ ವೇಳೆ, ಒಂದೇ ರೀತಿಯ ಎಪಿಕ್ ಸಂಖ್ಯೆಯಿರುವ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಮತದಾರರು ನಿಜವಾದ ಮತದಾರರಾಗಿದ್ದು, ಬೇರೆ ಬೇರೆ ಮತ ಕ್ಷೇತ್ರದಲ್ಲಿರುವವರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮಾರ್ಚ್ ತಿಂಗಳಲ್ಲಿ, ಟಿ.ಎಂ.ಸಿ. ಸೇರಿದಂತೆ ಹಲವು ವಿರೋಧ ಪಕ್ಷಗಳು, ನಕಲಿ ಮತದಾರರ ಗುರುತಿನ ಚೀಟಿಯ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಚುನಾವಣಾ ಆಯೋಗವು ಮೂರು ತಿಂಗಳ ಒಳಗೆ, ದಶಕದ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಚುನಾವಣಾ ಆಯೋಗವು, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 4,123 ವಿಧಾನ ಸಭಾ ಕ್ಷೇತ್ರಗಳ 10.50 ಲಕ್ಷ ಮತದಾನ ಕ್ಷೇತ್ರದ, 99 ಕೋಟಿ ಮತದಾರರ ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.