ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಸತೀಶ್‌ ನಂದಗಾಂವ್ಕರ್‌ ಹತ್ಯೆ: ತನಿಖೆಗೆ ಆಗ್ರಹ

Published 16 ಮಾರ್ಚ್ 2024, 15:50 IST
Last Updated 16 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ನವದೆಹಲಿ: ‘ಪತ್ರಕರ್ತ ಸತೀಶ್‌ ನಂದಗಾಂವ್ಕರ್‌ ಹತ್ಯೆಗೆ ಸಂಬಂಧಿಸಿದ ಆರೋಪಗಳ ಕುರಿತು ನ್ಯಾಯೋಚಿತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು’ ಎಂದು ಸಂಬಂಧಪಟ್ಟ ಮುಂಬೈನ ವೃತ್ತಪತ್ರಿಕೆಯ ಆಡಳಿತ ಮಂಡಳಿಗೆ ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಶನಿವಾರ ಆಗ್ರಹಿಸಿದೆ.

ಸತೀಶ್‌ ಅವರು ಫೆಬ್ರುವರಿ 28ರಂದು ಅಕಾಲಿಕವಾಗಿ ಮೃತಪಟ್ಟಿದ್ದರು. ಆದ್ದರಿಂದ, ‘ಸತೀಶ್‌ ಅವರ ಸಾವಿನ ಅಕಾಲಿಕ ಸಾವಿನ ಬಗ್ಗೆ ತಿಳಿದು ನಮಗೆ ತೀವ್ರ ದುಃಖವಾಗಿದೆ. ಸತೀಶ್‌ ಅವರ ಸಾವಿನ ಕುರಿತು ಇತ್ತೀಚೆಗೆ ನೀಡಿರುವ ಹೇಳಿಕೆಗಳು ನಮ್ಮ ಗಮನವನ್ನು ಸೆಳೆದಿವೆ’ ಎಂದು ಗಿಲ್ಡ್‌ನ ಪ್ರಕಟಣೆ ತಿಳಿಸಿದೆ.

‘ಸುದ್ದಿಮನೆಯಲ್ಲಿ ಅನಕೂಲಕರ ವಾತಾವರಣ ನಿರ್ಮಿಸಲು ಗಿಲ್ಡ್‌ ಶ್ರಮಿಸುತ್ತದೆ’ ಎಂದೂ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT