ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಖಾಸಗಿ ವಿಮಾನದ ಪೈಲಟ್ ತನ್ನ ಕೆಲಸದ ಅವಧಿ ಮುಕ್ತಾಯಗೊಂಡಿದೆ ಎಂದು ವಿಮಾನ ಕಾರ್ಯಾಚರಣೆಗೆ ನಿರಾಕರಿಸಿದ ಘಟನೆ ಶುಕ್ರವಾರ ನಡೆದಿದೆ. ಇದರಿಂದಾಗಿ, ಜಲಗಾಂವ್ನಿಂದ ಮುಂಬೈಗೆ ತೆರಳಬೇಕಿದ್ದ ಅವರ(ಶಿಂದೆ) ಪ್ರಯಾಣ ಸುಮಾರು ಒಂದು ಗಂಟೆ ತಡವಾಗಿದೆ.

ಈ ಬಗ್ಗೆ 'ಎನ್ಡಿಟಿವಿ' ವರದಿ ಮಾಡಿದೆ.

ಮೂಲಗಳ ಪ್ರಕಾರ, ಮುಕ್ತಾಯಿನಗರದಲ್ಲಿ ಆಯೋಜನೆಗೊಂಡಿದ್ದ ಸಂತ ಮುಕ್ತಾಯಿಯ 'ಪಾಲ್ಖಿ ಯಾತ್ರೆ' (ಧಾರ್ಮಿಕ ಮೆರವಣಿಗೆ)ಯಲ್ಲಿ ಪಾಲ್ಗೊಂಡ ಶಿಂದೆ ನಂತರ, ಜಲಗಾಂವ್ನಿಂದ ಮುಂಬೈಗೆ ತೆರಳಲು ಸಿದ್ಧವಾದಾಗ ಈ ಘಟನೆ ನಡೆದಿದೆ.

ಶಿಂದೆ ಅವರು, ಮಧ್ಯಾಹ್ನ 3.45ರ ವೇಳೆಗೆ ಜಲಗಾಂವ್ಗೆ ಆಗಮಿಸಬೇಕಿತ್ತು. ಆದರೆ, ತಾಂತ್ರಿಕ ತೊಂದರೆಗಳಿಂದಾಗಿ ಅವರು ಆಗಮಿಸುವುದು ಸುಮಾರು ಎರಡೂವರೆ ಗಂಟೆಗಳಷ್ಟು ವಿಳಂಬವಾಗಿತ್ತು. ಜಲಗಾಂವ್ಗೆ ಬಂದ ನಂತರ, ಅವರು ರಸ್ತೆ ಮೂಲಕ ಮುಕ್ತಾಯಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಅವರೊಂದಿಗೆ ಸಚಿವರಾದ ಗಿರೀಶ್ ಮಹಾಜನ್, ಗುಲಾಬ್ ರಾವ್ ಪಾಟೀಲ್ ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳೂ ಇದ್ದರು.

ಪಾಲ್ಖಿ ಯಾತ್ರೆಯಲ್ಲಿ ಪಾಲ್ಗೊಂಡು, ಸಂತ ಮುಕ್ತಾಯಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ, ಶಿಂದೆ ಹಾಗೂ ಅವರ ತಂಡ ರಾತ್ರಿ 9.15ರ ವೇಳೆಗೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಮರಳಿದ್ದರು. ಆದರೆ ಪೈಲಟ್ ತನ್ನ ಕೆಲಸದ ಸಮಯ ಮುಕ್ತಾಯಗೊಂಡಿದೆ ಎಂದು ವಿಮಾನ ಕಾರ್ಯಾಚರಣೆಗೆ ನಿರಾಕರಿಸಿದ್ದಾರೆ. ಅಲ್ಲದೇ ತನ್ನ ಕೆಲಸದ ಸಮಯ ಮುಗಿದಿರುವುದರಿಂದ, ಮತ್ತೆ ವಿಮಾನ ಕಾರ್ಯಾಚರಣೆಗೆ ಹೊಸ ಅನುಮತಿ ಪಡೆಯಲು ಕೆಲ ಸಮಯ ಹಿಡಿಯಲಿದೆ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲದೇ ತಾನು ವಿಮಾನ ಕಾರ್ಯಾಚರಣೆಗೆ ನಿರಾಕರಿಸುತ್ತಿರುವುದಕ್ಕೆ ಆರೋಗ್ಯ ಸಮಸ್ಯೆ ಕೂಡ ಕಾರಣ ಎಂಬ ಸಮಜಾಯಿಷಿ ನೀಡಿದ್ದಾರೆ.

ಈ ವೇಳೆ ಡಿಸಿಎಂ ಜತೆಗಿದ್ದ ಸಚಿವರಾದ ಮಹಾಜನ್, ಪಾಟೀಲ್ ಮತ್ತು ಇತರ ಅಧಿಕಾರಿಗಳು ಪೈಲಟ್ನ ಮನವೊಲಿಸಲು ಪ್ರಯತ್ನಿಸಿದರು. ಸುಮಾರು 45 ನಿಮಿಷಗಳ ಚರ್ಚೆಯ ಬಳಿಕ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ.

ವಿಮಾನ ನಿರ್ಗಮನಕ್ಕೆ ಅನುಮತಿ ನೀಡುವ ಬಗ್ಗೆ ಮಹಾಜನ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ವಿಮಾನ ಮುಂಬೈಗೆ ಹೊರಟಿತು. ಪೈಲಟ್ಗೆ ಆರೋಗ್ಯ ಸಂಬಂಧಿಸಿದ ಸಮಸ್ಯೆ ಇತ್ತು. ಜತೆಗೆ ಕೆಲವು ತಾಂತ್ರಿಕ ತೊಂದರೆಗಳೂ ಇದ್ದವು. ನಾವು ವಿಮಾನಯಾನ ಕಂಪನಿಯೊಂದಿಗೆ ಮಾತನಾಡಿದೆವು. ಅವರು ಪೈಲಟ್ಗೆ ತಮ್ಮದೇ ಆದ ರೀತಿಯಲ್ಲಿ ಪರಿಸ್ಥಿತಿಯನ್ನು ವಿವರಿಸಿದರು ಎಂದು ಮಹಾಜನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.