ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೃದ್ಧೆಗೆ ಮೆಣಸಿನ ಪುಡಿ ಎರಚಿ ಅತ್ಯಾಚಾರ;ಒಡವೆ ಮಾರಾಟದ ವೇಳೆ ಸಿಕ್ಕಿಬಿದ್ದ ಆರೋಪಿ!

Published 26 ಆಗಸ್ಟ್ 2024, 6:37 IST
Last Updated 26 ಆಗಸ್ಟ್ 2024, 6:37 IST
ಅಕ್ಷರ ಗಾತ್ರ

ಅಲಪ್ಪುಳ: ಕೇರಳದ ಕಾಯಂಕುಲಂ ಎಂಬಲ್ಲಿ 70 ವರ್ಷದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಕನಕಕುನ್ನು ನಿವಾಸಿ ಧನೇಶ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಈತ ವೃದ್ಧೆಯ ಮೇಲೆ ಮೆಣಸಿನ ಪುಡಿ ಎರಚಿ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೃತ್ಯದ ಬಳಿಕ ವೃದ್ಧೆ ಬಳಿಯಿದ್ದ 56 ಗ್ರಾಂ ಚಿನ್ನ ಕದ್ದೊಯ್ದಿದ್ದ ಆರೋಪಿ, ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆ ಒಂಟಿಯಾಗಿ ವಾಸವಾಗಿದ್ದರು. ಇದನ್ನು ಅರಿತ ಆರೋಪಿ ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಿ ಮನೆಯೊಳಗೆ ಪ್ರವೇಶಿಸಿದ್ದ. ಬಳಿಕ ಆಕೆಯ ಮೊಬೈಲ್ ಅನ್ನು ಸ್ವಿಚ್‌ ಆಫ್ ಮಾಡಿದ್ದ. ಇದರಿಂದಾಗಿ ಇತರರನ್ನು ಸಂಪರ್ಕಿಸಲು ಸಂತ್ರಸ್ತೆಗೆ ಸಾಧ್ಯವಾಗಿರಲಿಲ್ಲ. ನೆರೆಹೊರೆಯವರು ಇಂದು ಬೆಳಿಗ್ಗೆ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT