ನವದೆಹಲಿ: ‘ಜಗದೀಪ್ ಧನಕರ್ ಅವರು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಎರಡು ದಿನದ ಬಳಿಕ ನೂತನ ಉಪ ರಾಷ್ಟ್ರಪತಿ ಆಯ್ಕೆ ಸಂಬಂಧ ಚುನಾವಣೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ’ ಎಂದು ಕೇಂದ್ರ ಚುನಾವಣಾ ಆಯೋಗವು ಬುಧವಾರ ತಿಳಿಸಿದೆ.

ಈಗಾಗಲೇ ಸಂಸತ್ನ ಉಭಯ ಸದನಗಳ ಅರ್ಹ ಸದಸ್ಯರ ಮಾಹಿತಿ ಪಡೆಯಲಾಗುತ್ತಿದೆ. ಉಪ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾದ ಹಾಗೂ ರಾಷ್ಟ್ರಪತಿಗಳಿಂದ ನೇಮಕಗೊಂಡ ಸಂಸತ್ನ ಉಭಯ ಸದಸ್ಯರು ಮತ ಚಲಾಯಿಸಲು ಅವಕಾಶವಿದೆ.

ಉಪ ರಾಷ್ಟ್ರಪತಿಯವರ ರಾಜೀನಾಮೆ ಅಂಗೀಕಾರವಾಗಿರುವುದನ್ನು ಗೃಹ ಸಚಿವಾಲಯವು ಔಪಾಚಾರಿಕವಾಗಿ ತಿಳಿಸಿದೆ. ಅದರ ಬೆನ್ನಲ್ಲೇ, ಆಯೋಗವು ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದೆ. ಅಲ್ಲದೇ, ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳನ್ನು ಅಂತಿಮಗೊಳಿಸಿದೆ.

‘ಪ್ರಾಥಮಿಕ ಹಂತದ ಚಟುವಟಿಕೆಗಳು ಮುಕ್ತಾಯಗೊಂಡ ಬಳಿಕ ಭಾರತದ ಉಪ ರಾಷ್ಟ್ರಪತಿ ಹುದ್ದೆಯ ಭರ್ತಿಗೆ ಆದಷ್ಟು ಬೇಗ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದೆ.

ಉಪ ರಾಷ್ಟ್ರಪತಿಯವರು ಮೃತಪಟ್ಟರೆ, ರಾಜೀನಾಮೆ ಅಥವಾ ಪದಚ್ಯುತಿಗೊಳಿಸಿದ ಸಂದರ್ಭದಲ್ಲಿ ಸಂವಿಧಾನದ 68ನೇ ವಿಧಿಯ ಕಲಂ 2ರ ಅನುಗುಣವಾಗಿ, ಆದಷ್ಟು ಬೇಗ ಚುನಾವಣೆ ನಡೆಸುವ ಮೂಲಕ ಹುದ್ದೆ ಭರ್ತಿ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ ನಿರ್ದಿಷ್ಟ ಗಡುವು ವಿಧಿಸಿಲ್ಲ.

ಖಾಲಿಯಿರುವ ಹುದ್ದೆಗೆ ಆಯ್ಕೆಯಾದ ವ್ಯಕ್ತಿಯು ತಮ್ಮ ಕಚೇರಿಗೆ ಪ್ರವೇಶಿಸಿದ ದಿನದಂದು ಐದು ವರ್ಷಗಳ ಕಾಲ ಅಧಿಕಾರ ಹೊಂದಿರುತ್ತಾರೆ.

ಆಯೋಗವು ಅಧಿಸೂಚನೆ ಹೊರಡಿಸಿದ ನಂತರ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ, ಮತದಾನ ಹಾಗೂ ಎಣಿಕೆ ಪ್ರಕ್ರಿಯೆಯೂ 30 ದಿನಗಳ ಒಳಗಾಗಿ ಪೂರ್ಣಗೊಳ್ಳಬೇಕು.

ಎನ್ಡಿಎಗೆ ಸರಳ ಬಹುಮತ: ನೂತನ ಉಪ ರಾಷ್ಟ್ರಪತಿ ಆಯ್ಕೆ ಮಾಡಲು ಎನ್ಡಿಒ ಒಕ್ಕೂಟವು ಸಂಸತ್ತಿನಲ್ಲಿ ಸರಳ ಬಹುಮತ ಹೊಂದಿದೆ.

ಲೋಕಸಭೆಯ 543 ಸದಸ್ಯರ ಪೈಕಿ ಪಶ್ಚಿಮ ಬಂಗಾಳದ ಬಸಿರ್ಹಾಟ್ ಕ್ಷೇತ್ರದ ಸಂಸದ ಹಾಜಿ ನುರೂಲ್ ಇಸ್ಲಾಂ ನಿಧನದಿಂದ ಕ್ಷೇತ್ರ ತೆರವಾಗಿದೆ. ರಾಜ್ಯಸಭೆಯ 245 ಸದಸ್ಯರ ಪೈಕಿ 5 ಕ್ಷೇತ್ರ ಖಾಲಿಯಿವೆ.

ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿ ಉಳಿದಿವೆ. ಪಂಜಾಬ್ನ ಆಮ್ ಆದ್ಮಿ ಪಕ್ಷದ ಮುಖಂಡ ಸಂಜೀವ್ ಅರೋರಾ ಅವರು ಕಳೆದ ತಿಂಗಳು ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಉಭಯ ಸದನಗಳಲ್ಲಿ 786 ಮಂದಿ ಅರ್ಹ ಮತದಾರರಿದ್ದು, ಗೆಲುವಿಗೆ 394 ಮತಗಳು ಅಗತ್ಯ. ಲೋಕಸಭೆಯಲ್ಲಿ ಎನ್ಡಿಎ ಒಕ್ಕೂಟವು 542ರ ಪೈಕಿ 293 ಸದಸ್ಯರ ಬೆಂಬಲ ಹೊಂದಿದ್ದು, ರಾಜ್ಯಸಭೆಯಲ್ಲಿ 129 ಸದಸ್ಯರ ಬಲ ಹೊಂದಿದ್ದು, ಆಡಳಿತರೂಡ ಒಕ್ಕೂಟವು ಒಟ್ಟು 422 ಸದಸ್ಯರ ಬೆಂಬಲ ಹೊಂದಿದೆ.

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಸೋಮವಾರದಂದು (ಬುಲೈ 21) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದು, ‘ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದರು.

‘ಆರೋಗ್ಯದ ಮೇಲೆ ಹೆಚ್ಚಿನ ಗಮನಹರಿಸಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.

74 ವರ್ಷದ ಧನಕರ್ ಅವರು 2022ರ ಆಗಸ್ಟ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ 2027ರ ಆಗಸ್ಟ್ 10ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು.
.ರಾಜೀನಾಮೆ ಘೋಷಣೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದ ಧನಕರ್.VP Dhankar Resigns | ಧನಕರ್ ದಿಢೀರ್ ರಾಜೀನಾಮೆ ಆಘಾತಕಾರಿ: ಗೌರವ್ ಗೊಗೋಯಿ.Dhankhar Resigns | ಧನಕರ್ ರಾಜೀನಾಮೆ ತಕ್ಷಣದಿಂದ ಜಾರಿಗೆ: ಕೇಂದ್ರ ಗೃಹ ಸಚಿವಾಲಯ.VP Dhankhar Resignation: ಧನಕರ್ ದಿಢೀರ್ ರಾಜೀನಾಮೆ ಸುತ್ತ ಹಲವು ಅನುಮಾನಗಳು.ಧನಕರ್ ರಾಜೀನಾಮೆ: ರಾಜ್ಯಸಭೆ ಕಲಾಪ ನಿರ್ವಹಿಸಿದ ಉಪಸಭಾಪತಿ ಹರಿವಂಶ್.ಧನಕರ್ ರಾಜೀನಾಮೆಗೆ ಕಾರಣ ನರೇಂದ್ರ ಮೋದಿ, ಅಮಿತ್ ಶಾಗೆ ಮಾತ್ರ ಗೊತ್ತು: ವಿಪಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.