ನವದೆಹಲಿ: ಚುನಾವಣಾ ಆಯೋಗವು ನಿರ್ಣಾಯಕ ಮಾಹಿತಿಯನ್ನು ಮುಚ್ಚಿಡುವ ಮೂಲಕ ‘ಮತ ಕಳ್ಳತನ’ದಲ್ಲಿ ಭಾಗಿಯಾಗಿದವರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದರು.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಕಲು ಮಾಡಿದ ಫಾರ್ಮ್ 7 ಬಳಸಿಕೊಂಡು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ವ್ಯವಸ್ಥಿತ ಪ್ರಯತ್ನ ನಡೆಸಲಾಗಿತ್ತು. ಪ್ರಕರಣದ ತಪ್ಪಿತಸ್ಥರನ್ನು ಬಂಧಿಸಲು ಅಗತ್ಯವಾದ ಮಾಹಿತಿಯನ್ನು ಚುನಾವಣಾ ಆಯೋಗ ಹಂಚಿಕೊಳ್ಳದ ಕಾರಣ ಸದ್ಯ ಪ್ರಕರಣವು ತಣ್ಣಗಾಗಿದೆ ಎಂದು ಹೇಳಲಾದ ಮಾಧ್ಯಮ ವರದಿಯನ್ನು ಖರ್ಗೆ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

2023ರ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದಲ್ಲಿ ಸಾವಿರಾರು ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಯಿತು. ಈ ಬಗ್ಗೆ ಫೆಬ್ರುವರಿಯಲ್ಲಿ ದೂರು ದಾಖಲಿಸಲಾಯಿತು. 5,994 ನಕಲಿ ಅರ್ಜಿಗಳಿರುವುದು ತನಿಖೆ ವೇಳೆ ಪತ್ತೆಯಾಯಿತು. ಬಳಿಕ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವಹಿಸಿತು. ಆಯೋಗವು ಮೊದಮೊದಲು ಕೆಲವು ದಾಖಲೆಗಳನ್ನು ಹಂಚಿಕೊಂಡಿತ್ತು. ಆದರೆ ಸದ್ಯ ನಿರ್ಣಾಯಕ ಮಾಹಿತಿಯನ್ನು ಮರೆಮಾಚುತ್ತಿದೆ. ಈ ಮೂಲಕ ಮತಗಳ್ಳರ ರಕ್ಷಣೆ ಮಾಡುತ್ತಿದೆ ಎಂದು ದೂರಿದರು.

‘ಆಯೋಗವು ಯಾರನ್ನು ರಕ್ಷಿಸುತ್ತಿದೆ; ಬಿಜೆಪಿಯ ಮತ ಕಳ್ಳತನ ಇಲಾಖೆಯನ್ನೇ? ಸಿಐಡಿ ತನಿಖೆಯ ಹಾದಿ ತಪ್ಪಿಸಲು ಬಿಜೆಪಿಯು ಒತ್ತಡ ಹೇರುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು.

ಖರ್ಗೆ ಅವರು ಆರೋಪಕ್ಕೆ ಸಂಬಂಧಿಸಿದಂತೆ ಆಯೋಗ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದಕ್ಕೂ ಮುನ್ನ ಕಾಂಗ್ರೆಸ್ ಮಾಡಿದ್ದ ಎಲ್ಲ ಆರೋಪಗಳನ್ನೂ ಆಯೋಗ ಅಲ್ಲಗಳೆದಿತ್ತು.

‘ಮತಪತ್ರ ಬಳಕೆ– ಕರ್ನಾಟಕ ಸರ್ಕಾರದ ನಡೆ ಸ್ವಾಗತಾರ್ಹ’

ಕಲಬುರಗಿ: ‘ದೇಶದಲ್ಲಿ 15–16 ವರ್ಷಗಳಿಂದ ಈಚೆಗೆ ಬಳಸುತ್ತಿರುವ ಇವಿಎಂಗಳನ್ನೇ ನೀವೆಲ್ಲ ನಂಬುವುದಾದರೆ ದೇಶದಲ್ಲಿ 50 ವರ್ಷಗಳ ಕಾಲ ಬಳಸಿದ್ದ ಮತಪತ್ರಗಳನ್ನು ಯಾಕೆ ನಂಬಬಾರದು? ಎಂದು ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಪ್ರತಿಕ್ರಿಯಿಸಿದರು.

‘ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸುವ ಕರ್ನಾಟಕ ಸರ್ಕಾರದ ನಡೆ ಸ್ವಾಗತಾರ್ಹ’ ಎಂದು ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಯಾವುದೇ ವ್ಯವಸ್ಥೆಯ ಆಗು–ಹೋಗುಗಳನ್ನು ನೋಡಿಕೊಂಡು ಬದಲಾವಣೆ ತರಲಾಗುತ್ತದೆ. ಕರ್ನಾಟಕ ಸರ್ಕಾರ ಅಂಥ ಬದಲಾವಣೆ ತರಲು ನಿರ್ಧರಿಸಿದೆ ಎಂದರು. ‘ನೀವು ಇವಿಎಂ ಬದಲಾಯಿಸುತ್ತೀರಿ ಮತಗಳನ್ನೂ ಕಳ್ಳತನ ಮಾಡುತ್ತೀರಿ. ಕರ್ನಾಟಕದ ಕಲಬುರಗಿ ಹಾಗೂ ಬಿಹಾರದಲ್ಲೂ ಇದನ್ನು ನೋಡಿದ್ದೇವೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದ ಐದಾರು ಕಡೆ 20 ಸಾವಿರದಷ್ಟು ಮತಗಳ ಅಂತರ ಹೇಗೆ ಬರಲು ಸಾಧ್ಯ? ಹೀಗಾದರೆ ಇವಿಎಂ ಮೇಲೆ ನಂಬಿಕೆ ಹೇಗೆ ಬರಬೇಕು?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.