ಪಟ್ನಾ/ಕೋಲ್ಕತ್ತ: ಬಿಹಾರ ಮತ್ತು ಪಶ್ಚಿಮಬಂಗಾಳದ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿರುವ ಕಾರಣಕ್ಕೆ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರಿಗೆ ಮಂಗಳವಾರ ನೋಟಿಸ್ ನೀಡಲಾಗಿದೆ.

‘ಈ ಬಗ್ಗೆ ಮೂರು ದಿನಗಳೊಳಗಾಗಿ ಪ್ರತಿಕ್ರಿಯೆ ನೀಡುವಂತೆ‘ ಬಿಹಾರದ ರೊಹ್ಟಸ್ ಜಿಲ್ಲಾ ಚುನಾವಣಾ ಕಚೇರಿಯು ನೋಟಿಸ್ನಲ್ಲಿ ಸೂಚಿಸಿದೆ. ಪ್ರಶಾಂತ್ ಅವರು ಇದೇ ಜಿಲ್ಲೆಯ ಕರ್ಗಹರ್ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ ಪ್ರಶಾಂತ್ ಕಿಶೋರ್ ಅವರು ಪಶ್ಚಿಮಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರ ಇದಾಗಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಪ್ರಧಾನ ಕಚೇರಿಯೂ ಇದೇ ಕ್ಷೇತ್ರದಲ್ಲಿದೆ ಎಂದು ಪಶ್ಚಿಮಬಂಗಾಳದ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ 2021ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಟಿಎಂಸಿ ರಾಜಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ವಿಳಾಸ ಬದಲಾವಣೆಯಾದ ಸಂದರ್ಭದಲ್ಲಿ ಮತದಾರರು ತಮ್ಮ ಹೆಸರನ್ನು ಹೊಸ ವಿಳಾಸದ ಮತದಾರರ ಪಟ್ಟಿಯಲ್ಲಿ ಸೇರಿಸಲು ’ಫಾರ್ಮ್ 8’ ಅನ್ನು ಸಲ್ಲಿಸಬೇಕು. ನನ್ನ ವಿಳಾಸ ಬದಲಾಗಿದೆ ಮತ್ತು ಹಿಂದಿನ ವಿಳಾಸದಲ್ಲಿನ ಮತದಾರರ ಪಟ್ಟಿಯಿಂದ ಹೆಸರು ರದ್ದುಗೊಳಿಸಲು ಒಪ್ಪಿಗೆಯಿದೆ ಎಂಬ ಘೋಷಣೆ ಇದಾಗಿರುತ್ತದೆ.

ಎರಡು ಸ್ಥಳಗಳ ಮತದಾರರಾಗಿ ಕಿಶೋರ್ ನೋಂದಣಿ ಮಾಡಿಕೊಂಡಿರುವ ಬಗ್ಗೆ ಪತ್ರಿಕೆಯೊಂದು ಮಾಡಿರುವ ವರದಿಯನ್ನು ಉಲ್ಲೇಖಿಸಿ ನೋಟಿಸ್ ಜಾರಿ ಮಾಡಲಾಗಿದೆ.

’ಚುನಾವಣಾ ಆಯೋಗದಿಂದ ಲೋಪ’

‘ಪಶ್ಚಿಮಬಂಗಾಳದ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಡುವಂತೆ ಮನವಿ ಮಾಡಿದ ಬಳಿಕವೂ ಎರಡು ಸ್ಥಳಗಳ ಮತದಾರರ ಪಟ್ಟಿಯಲ್ಲಿ ಹೆಸರಿರುವುದಕ್ಕೆ ಚುನಾವಣಾ ಆಯೋಗವೇ ಹೊಣೆ’ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ‘ಇದು ಚುನಾವಣಾ ಆಯೋಗದ ಬೇಜವಾಬ್ದಾರಿ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಅನ್ನು ನಡೆಸಲಾಗಿದೆ. ಹಲವಾರು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಶಾಂತ್ ಕಿಶೋರ್ ಅವರಂಥ ಜನಪ್ರಿಯ ವಕ್ತಿಯ ವಿಚಾರದಲ್ಲಿಯೇ ಅವರು ಲೋಪ ಎಸಗಿರುವಾಗ ಇನ್ನೂ ಉಳಿದ ವಿಚಾರಗಳಲ್ಲಿ ಅವರ ಕಾರ್ಯವೈಖರಿ ಹೇಗಿರಬಹುದು ಎಂಬುವುದನ್ನು ಊಹೆ ಮಾಡಬಹುದು‘ ಎಂದು ಜನ ಸುರಾಜ್ ಪಕ್ಷದ ವಕ್ತಾರ ಕುಮಾರ್ ಸೌರಭ್ ಸಿಂಗ್ ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.