ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSPolls: ಅನಂತ್‌ನಾಗ್- ರಜೌರಿ ಕ್ಷೇತ್ರದ ಮತದಾನ ಮೇ 25ಕ್ಕೆ ಮುಂದೂಡಿಕೆ

Published 30 ಏಪ್ರಿಲ್ 2024, 15:47 IST
Last Updated 30 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಶ್ರೀನಗರ: ಮೇ 7ರಂದು ನಡೆಯಬೇಕಿದ್ದ ಅನಂತ್‌ನಾಗ್- ರಜೌರಿ ಲೋಕಸಭಾ ಕ್ಷೇತ್ರದ ಮತದಾನವನ್ನು ಮೇ 25ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಮತದಾನದ ದಿನಾಂಕವನ್ನು ಮರುಹೊಂದಿಸುವಂತೆ ಜಮ್ಮು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವಿಂದರ್ ರೈನಾ, ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ, ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಇಮ್ರಾನ್ ಅನ್ಸಾರಿ ಮತ್ತು ಇತರರು ಮಾಡಿದ್ದ ಮನವಿಯನ್ನು ಆಲಿಸಿದ ಚುನಾವಣಾ ಆಯೋಗ ಈ ಬದಲಾವಣೆ ಮಾಡಿದೆ.

ದಕ್ಷಿಣ ಕಾಶ್ಮೀರದ ಕೆಲ ಭಾಗಗಳು, ಪೂಂಛ್‌ನ ಜಮ್ಮು ವಲಯದ ರಜೌರಿಯ ಕೆಲ ಭಾಗಗಳನ್ನು ಹೊಂದಿರುವ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಸ್ಥಿತಿ, ಹವಾಮಾನ ಕುರಿತಂತೆ ವಿವರವಾದ ವರದಿ ನೀಡುವಂತೆ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದ ಆಡಳಿತಕ್ಕೆ ಸೂಚಿಸಿದೆ.

ಆದರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಚುನಾವಣೆ ಮುಂದೂಡದಂತೆ ಒತ್ತಾಯಿಸಿದ್ದರು.

ಪಿಡಿಪಿ ಮುಖ್ಯಸ್ಥೆ ಮೆಹಮೂಬಾ ಮುಫ್ತಿ, ಎನ್‌ಸಿ ನಾಯಕ ಮಿಲನ್ ಅಲ್ತಾಫ್ ಸೇರಿ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT