ರಾಯಪುರ: ಛತ್ತೀಸಗಢ ಲೋಕಸೇವಾ ಆಯೋಗದ (ಸಿಜಿಪಿಎಸ್ಸಿ) ಕಚೇರಿ ಸೇವಕನಾಗಿ ಏಳು ತಿಂಗಳಿನಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದ ಶೈಲೇಂದ್ರ ಕುಮಾರ್ ಬಾಂಧೆ (29), ಇದೀಗ ಸಹಾಯಕ ಆಯುಕ್ತ.

ನಾಲ್ಕು ಬಾರಿ ಪ್ರಯತ್ನದಲ್ಲಿ ವಿಫಲ ಆದರೂ ಸರ್ಕಾರಿ ಅಧಿಕಾರಿಯಾಗಬೇಕು ಎಂಬ ಛಲ, ಗುರಿ ಸಾಧನೆಯತ್ತ ಹೊಂದಿದ್ದ ಬದ್ಧತೆ ಹಾಗೂ ಸತತ ಪರಿಶ್ರಮದಿಂದ ಐದನೇ ಯತ್ನದಲ್ಲಿ ಯಶಸ್ಸನ್ನು ತನ್ನದಾಗಿಸಿಕೊಂಡವರು ಅವರು.

ಸಿಜಿಪಿಎಸ್ಸಿ–2023 ಪರೀಕ್ಷೆಯ ಫಲಿತಾಂಶ ಕಳೆದ ವಾರ ಪ್ರಕಟಗೊಂಡಿದೆ. ಸಾಮಾನ್ಯ ವಿಭಾಗದಲ್ಲಿ 73ನೇ ರ್ಯಾಂಕ್ ಪಡೆದಿರುವ ಬಾಂಧೆ, ಮೀಸಲಾತಿ ಕೋಟಾದಡಿ ಎರಡನೇ ಸ್ಥಾನ ಪಡೆದಿದ್ದು, ಸಹಾಯಕ ಆಯುಕ್ತರ (ರಾಜ್ಯ ತೆರಿಗೆ) ಹುದ್ದೆಗೆ ನೇಮಕಗೊಳ್ಳುವ ಮೂಲಕ, ಯುವ ಸ್ಪರ್ಧಾಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.

‘ಈ ಯಶಸ್ಸು, ಪ್ರತಿ ಹಂತದಲ್ಲೂ ನನ್ನ ಬೆನ್ನಿಗೆ ನಿಂತಿದ್ದ ಪೋಷಕರದ್ದು’ ಎನ್ನುತ್ತಾರೆ ರಾಯಪುರ ಎನ್ಐಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಶೈಲೇಂದ್ರ.

ಖಾಸಗಿ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದರೂ, ಸರ್ಕಾರಿ ಅಧಿಕಾರಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಂಡ ಬಾಂಧೆ, ಬಿಲಾಸ್ಪುರ ಜಿಲ್ಲೆಯ ಬಿಟ್ಕುಲಿ ಗ್ರಾಮದ ಪರಿಶಿಷ್ಟ ಜಾತಿಯ ಕೃಷಿ ಕುಟುಂಬವೊಂದರಲ್ಲಿ ಜನಿಸಿದವರು.

ಘನತೆಯಿದೆ:

‘ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಸಿಜಿಪಿಎಸ್ಸಿ–2023ರ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ಸರ್ಕಾರಿ ಅಧಿಕಾರಿಯಾಗಬೇಕು ಎಂಬ ಗುರಿ ಸಾಧನೆಗಾಗಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಈ ಹಂತದಲ್ಲಿ ಮೇ ತಿಂಗಳಲ್ಲಿ ಸಿಜಿಪಿಎಸ್ಸಿ ಕಚೇರಿಯ ಸೇವಕನಾಗಿ ನೇಮಕಗೊಂಡೆ. ಸೇವಕನ ಕೆಲಸಕ್ಕೆ ಸೇರಿದ ನಂತರವೂ ನನ್ನ ಸಿದ್ಧತೆಯನ್ನು ಮುಂದುವರಿಸಿದ್ದೆ’ ಎಂದು ಶುಕ್ರವಾರ ‘ಪಿಟಿಐ ವಿಡಿಯೊ’ಗೆ ಶೈಲೇಂದ್ರ ತಿಳಿಸಿದರು.

‘ಸೇವಕನಾಗಿ ಕೆಲಸ ಮಾಡುವಾಗ ಸಾಕಷ್ಟು ನಿಂದನೆ ಎದುರಿಸಿದೆ. ಕೆಲವರು ಗೇಲಿ ಮಾಡಿದರು. ನಾನು ಅದರತ್ತ ಗಮನವನ್ನೇ ನೀಡಲಿಲ್ಲ. ಪ್ರತಿ ಹಂತದಲ್ಲೂ ಕುಟುಂಬ ನನ್ನ ಬೆನ್ನಿಗಿತ್ತು’ ಎಂದು ‘ಡಿ’ ದರ್ಜೆಯ ನೌಕರನಾಗಿ ಕೆಲಸ ಮಾಡುತ್ತಿದ್ದುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಬಾಂಧೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.