ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಯಲ್ಲಿ ಲಕ್ಷಾಂತರ ಹುದ್ದೆ ಖಾಲಿಯಿದ್ದರೂ ಯುವಕರಿಗೆ ಅನ್ಯಾಯ: ರಾಹುಲ್ ಗಾಂಧಿ

ರೈಲ್ವೆ ಇಲಾಖೆಯ ‘ರೈಲ್ವೆ ನೇಮಕಾತಿ ಮಂಡಳಿಗಳಿಂದ‘(RRBs) 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ: ಕಡಿಮೆ ಹುದ್ದೆಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ
Published 20 ಜನವರಿ 2024, 11:47 IST
Last Updated 20 ಜನವರಿ 2024, 11:47 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ಸೂಕ್ತವಾಗಿ ನೇಮಕಾತಿ ಮಾಡಿಕೊಳ್ಳದೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರೈಲ್ವೆ ಇಲಾಖೆ ‘ರೈಲ್ವೆ ನೇಮಕಾತಿ ಮಂಡಳಿಗಳಿಂದ‘(RRBs) 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ರಾಹುಲ್ ಗಾಂಧಿ X ತಾಣದಲ್ಲಿ ಕಿಡಿಕಾರಿದ್ದಾರೆ.

ರೈಲ್ವೆಯಲ್ಲಿ ಲಕ್ಷಗಟ್ಟಲೆ ಹುದ್ದೆಗಳು ಖಾಲಿಯಿದ್ದರೂ, ಯುವಕರು 5 ವರ್ಷ ಕಾಯ್ದರೂ ಈಗ ಕೇವಲ 5,696 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗಿದೆ ಎಂದು ಟೀಕಿಸಿದ್ದಾರೆ.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ನೀವು, ಯಾರಿಗೆ ಲಾಭ ಮಾಡಿ ಕೊಡಲು ರೈಲ್ವೆಯಲ್ಲಿ ಹುದ್ದೆಗಳ ಕಡಿತ ಮಾಡುತ್ತಿದ್ದೀರಿ. ರೈಲ್ವೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂಬ ನಿಮ್ಮ ಭರವಸೆ ಏನಾಯಿತು? ಎಂದು ‍ಪ್ರಶ್ನಿಸಿದ್ದಾರೆ.

ಇಷ್ಟು ವರ್ಷ ಕಾಯ್ದರೂ ಇಷ್ಟು ಕಡಿಮೆ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ಮೋದಿಯವರ ಗ್ಯಾರಂಟಿ ಯುವಕರಿಗೆ ಎಚ್ಚರಿಕೆ ಕರೆಗಂಟೆಯಾಗಿದೆ ಎಂದು ಹೇಳಿ #NyayForYuva ಎಂಬ ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT