ನವದೆಹಲಿ: ಅರವಿಂದ ಕೇಜ್ರಿವಾಲ್ ಅವರು ನೀಡಿರುವ ಹೇಳಿಕೆಯು ಸುಳ್ಳು ಮತ್ತು ಜನರನ್ನು ದಾರಿತಪ್ಪಿಸುವಂತಹದ್ದು ಎಂದು ದೆಹಲಿ ಲಿಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯ ಎಲ್ಲಾ ಕೊಳಗೇರಿ ಪ್ರದೇಶಗಳನ್ನು ನೆಲಸಮ ಮಾಡುತ್ತದೆ. 'ಮೊದಲು ನಿಮ್ಮ ಮತಗಳು ಅವರಿಗೆ (ಬಿಜೆಪಿ) ಅಗತ್ಯವಾಗಿರುತ್ತದೆ. ಬಳಿಕ ನಿಮ್ಮ ಕೊಳಗೇರಿ ಪ್ರದೇಶಗಳನ್ನು ನೆಲಸಮ ಮಾಡುತ್ತಾರೆ. ಕೊಳಗೇರಿ ನಿವಾಸಿಗಳನ್ನು ಬಿಜೆಪಿ ಕಡೆಗಣಿಸಿದೆ ಎಂದು ಎಎಪಿ ಮುಖ್ಯ ಭಾನುವಾರ ಆರೋಪಿಸಿದ್ದರು.
.ಮಂಗಳೂರು | ಗುಂಪು ಘರ್ಷಣೆ: ನಾಲ್ವರು ಆರೋಪಿಗಳ ಬಂಧನ.ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡಿರುವ ವಿ.ಕೆ ಸಕ್ಸೇನಾ, ಅರವಿಂದ ಕೇಜ್ರಿವಾಲ್ ಅವರು ಸುಳ್ಳು ಮತ್ತು ಉದ್ದೇಶಪೂರ್ವಕವಾಗಿಯೇ ಜನರನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

'ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡದಂತೆ ಕೇಜ್ರಿವಾಲ್ ಅವರಿಗೆ ತಿಳಿಸಿರುವ ಸಕ್ಸೇನಾ, ಮತ್ತೆ ಕೊಳಗೇರಿಗಳ ವಿಷಯದಲ್ಲಿ ಸುಳ್ಳು ಹೇಳಿದರೆ ಡಿಡಿಎ (ದೆಹಲಿ ಅಭಿವೃದ್ಧಿ ಪ್ರಾಧಿಕಾರ) ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಿದೆ' ಎಂದು ಡಿಡಿಎ ಮುಖ್ಯಸ್ಥರೂ ಆಗಿರುವ ಸಕ್ಸೇನಾ ತಿಳಿಸಿದ್ದಾರೆ.

70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.
.Los Angeles: ಭೀಕರ ಸ್ಥಿತಿ; 80 ಕಿ.ಮೀ ವೇಗದಲ್ಲಿ ಗಾಳಿ, ಕಾಳ್ಗಿಚ್ಚು,Red Alert.ಮಧ್ಯಪ್ರದೇಶ | ಶಾಜಾಪುರ ಜಿಲ್ಲೆಯ 11 ಗ್ರಾಮಗಳ ಹೆಸರು ಬದಲಾವಣೆ: CM ಮೋಹನ್ ಯಾದವ್.ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಸೆಮಿಯಲ್ಲಿ ಕರ್ನಾಟಕಕ್ಕೆ ಹರಿಯಾಣ ಎದುರಾಳಿ.ಸಂಗತ | ನದಿ ಜೋಡಣೆ: ಅರಿವಿದೆಯೇ ಪರಿಣಾಮ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.